You are currently viewing ಹೂಸನಗೆ

ಹೂಸನಗೆ

ಹಗಲು ರಾತ್ರಿ ದಿನಗಳು ಹರಿದು
ಭೂಮಿ ಸುತ್ತಾಡಿತು

ಅಂತರಂಗದಲಿ ಅರಿವು
ಹೊಕ್ಕು ಮನವು ಕುಣಿದಾಡಿತು

ಹಳೆತಕೂಳೆತ ನೆನಪುಗಳಲ್ಲಿ
ಕಣ್ಣೀರು ಹರಿದಾಡಿತು

ದಿನಕರನ ಬೆಳಕಿನಲ್ಲಿ ಜೀವ
ಲೋಕದ ಬಾಳ ಕಳೆಯಿತು

ನಾಳೆಯ ಭವಿಷ್ಯದ ಚಿಂತೆ
ಮಾಡುತ ದಿನವು ನೋಕಿತು

ತಿಂಗಳು ಸಾಗುತ ದಿನಗಳು ಓಡುತ
ದಿನದರ್ಶಿಕೆ ಹಳೆಯದಾಯಿತು

ಒಂದು ಹೋಗಿ ಮತ್ತೊಂದು
ಬಂದು ವರ್ಷ ಮುಗಿಯಿತು

ಹರುಷವು ನಗುತ ಕುಣಿಯುತ ಹಳೆಯದಾಯಿತು
ಹೊಸ ನಗೆಗೆ ಕಾಯಿತ ಕುಳಿತಿತು

-ಡಾ.ಅ.ಬ.ಇಟಗಿ
ಬೆಳಗಾವಿ









Leave a Reply