ಓಶೋ ಯುಗಪುರುಷ
₹399.00
ಜೀವನ ಮತ್ತು ಸಂದೇಶ
| Book Details |
|---|
| Author : ಸಹನಾ ಹಿರೇಮಠ | ವೀರಯ್ಯ ಕೋಗಳಮಠ |
| Publisher : ಕದಂಬ ಪ್ರಕಾಶನ |
| ISBN : 9789395129220 |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಜಗತ್ತಿನಾದ್ಯಂತ ಭಾರತೀಯ ಆಧ್ಯಾತ್ಮಿಕತೆಯ ಬಗ್ಗೆ ತನ್ನದೇ ಶೈಲಿಯಲ್ಲಿ ಪ್ರವಚನ ನೀಡುತ್ತಿದ್ದ ಓಶೋ ಮಾತುಗಳನ್ನು ಕೇಳುವುದು ಬಹಳ ಆನಂದದಾಯಕ. ಆದರೆ ಅವರ ವೈಚಾರಿಕತೆ-ಭಾವಕತೆಯನ್ನು ಅರ್ಥಮಾಡಿಕೊಂಡು, ಪುಸ್ತಕದ ರೂಪದಲ್ಲಿ ಒಂದು ಆಧ್ಯಾತ್ಮಿಕ ಸನ್ನಿವೇಶದಲ್ಲಿ ಸಮರ್ಪಕ ವಿಧಿವಿಧಾನದಲ್ಲಿ ಪ್ರಸ್ತುತಪಡಿಸುವುದು ಬಲು ಕಠಿಣ. ಸಹನಾ ಮತ್ತು ವೀರಯ್ಯ ಅವರ ತನ್ಮಯತೆ, ಸರಳ ಭಾಷೆ, ಅಭಿವ್ಯಕ್ತಿಯಲ್ಲಿನ ನೇರವಂತಿಕೆ ಹಾಗೂ ವಿಷಯಗಳನ್ನು ಒಂದಾದ ಮೇಲೊಂದರಂತೆ ಸಂಘಟಿಸಿರುವ ಬಗೆ ಈ ಪುಸ್ತಕವನ್ನು ಚೆಲುವಾಗಿಸಿದೆ. ಜೊತೆಗೆ, ಈವರೆಗೂ ಓಶೋ ಕುರಿತು ಗಮನಕ್ಕೆ ಬಾರದ ಸಂಗತಿಗಳಿಂದ ಇದು ಒಂದು ಅರ್ಥಪೂರ್ಣ ಆಕರ ಕೃತಿಯಾಗಿಯೂ ಹೊರಹೊಮ್ಮಿದೆ. ಈ ಪುಸ್ತಕದ ಓದು ಆಹ್ಲಾದಕರ ಅನುಭವವನ್ನು ನೀಡಬಲ್ಲುದು; ತಿಳಿದಿರದ ಅನೇಕ ವಿಷಯಗಳಿಂದ ಮನಸ್ಸು ಪ್ರಫುಲ್ಲವಾಗುವುದು. ಕನ್ನಡದ ಓದುಗು ಮುಕ್ತ ಮನಸ್ಸಿನಿಂದ ಕೃತಿಯನ್ನು ಕೈಗೆತ್ತಿಕೊಂಡರೆ ಇಬ್ಬರೂ ಲೇಖಕರ ನಿಸ್ವಾರ್ಥ ಪರಿಶ್ರಮ ಸಾರ್ಥಕ.
– ಕೇಶವ ಮಳಲಿ



Reviews
There are no reviews yet.