ನನ್ನ ದೇಹ ಹೊತ್ತು ಎಲ್ಲಿಯಾದರೂ ಎಸೆದು ಬನ್ನಿ
ಮತ್ತೆ ಮತ್ತೆ ಸುತ್ತಿ ನಾ ಬರುವೆ ಇಲ್ಲಿಯೇ ಮತ್ತೆ ಹುಟ್ಟಿ
ಕನ್ನಡದ ಮಣ್ಣಿನಲ್ಲಿ ಬೆಳೆದು ಬೆಳೆ ನೀಡಿ ಹಸು ಎತ್ತು
ಎಮ್ಮೆ ಮೇಕೆ ಗಳಿಗೆ ಹುಲ್ಲಾಗಿ ಬೆಳೆಯುವೆ ಈ ಮಣ್ಣಿನಲ್ಲಿ ಮತ್ತೆ ಹುಟ್ಟಿ
ನನ್ನ ದೇಹ ಹೊತ್ತು
ಹೊಳೆಯಲ್ಲಿ ಯಾದರೂ ಒಗೆದುಬಿಡಿ ಮತ್ತೆ
ಸಮುದ್ರ ಸೇರಿ ಮೂಡವಾಗಿ ಜನಿಸಿ ಸುರಿದು ಬಿಡುವೆ
ಮುತ್ತಿನ ಮಳೆ ಚೆಲ್ಲುತ ಈ ನಾಡಿನಲ್ಲಿ ಮತ್ತೆ ಹುಟ್ಟಿ
ನನ್ನ ದೇಹ ಹೊತ್ತು ಕಿಚ್ಚು ಹಚ್ಚಿ ಬಂದರು
ಬೆಂಕಿಯಾಗಿ ಉರಿದು ಬೂದಿಯಾಗುತ್ತ
ಗಾಳಿಯಲಿ ತೇಲುತ್ತಾ ಸಾಗಿ ಬರುವೆ
ನಮ್ಮಮ್ಮ ಕನ್ನಡತಿಯ ಒಡಲಲ್ಲಿ ಮತ್ತೆ ಹುಟ್ಟಿ
ನಾ ಸತ್ತ ಮೇಲಾದರೂ
ನನ್ನ ಅಂಗಾಂಗಗಳನ್ನುಗಡಿನಾಡಿನ ಎಂಟು
ದಿಕ್ಕಿಗೆ ಎಸೆದು ಬಂದರು ನಾ ಸೇರಿವೆನು
ಕನ್ನಡ ಭಾಷೆ ಉಸಿರಿನಲ್ಲಿ ಮತ್ತೆ ಹುಟ್ಟಿ
ಅರಸಿನ ಕುಂಕುಮ ಇಟ್ಟು ಮುತ್ತೈದೆಯಾಗಿ
ಕಂಗೊಳಿಸುತ್ತಾ ಕುಣಿದಾಡುವೆನು
ಕಿತ್ತೂರು ರಾಣಿ ಚನ್ನಮ್ಮಳ ವೃತ್ತ
ಬೆಳಗಾವಿಯಲ್ಲಿ ಮತ್ತೆ ಹುಟ್ಟಿ
ಡಾ.ಅ.ಬ.ಇಟಗಿ
ಬೆಳಗಾವಿ