ಕನ್ನಡ ನುಡಿ ಕಿವಿಗೆ ಕೇಳಲು ಕಂಪು
ಕನ್ನಡದ ಗಾಳಿ ಬೀಸುವುದು ತಂಪು
ಕನ್ನಡ ಅಕ್ಷರಗಳು ನಾಲಿಗೆ ಮೇಲೆ ಓಡಾಡುವವು
ಕನ್ನಡ ಎಂದರೆ ಮೈಮನ ಮರೆಯುವುದು.
ಕನ್ನಡ ನಾಡು ಸಾಹಿತ್ಯ,ಸಂಸ್ಕೃತಿ,ಜಾನಪದ, ಯಕ್ಷಗಾನಗಳ ತವರೂರು
ಆಚಾರ ವಿಚಾರ, ಆಧ್ಯಾತ್ಮತೆಯ ಸಂಪ್ರದಾಯಗಳ ತವರೂರು
ಕವಿಗಳ ಲೇಖನಿ ವಿಚಾರಗಳ ಮೂಲಕ ಕನ್ನಡವನ್ನು ಆಕಾಶದೆತ್ತರ ಬೆಳೆಸಿರುವರು
ಕನ್ನಡಮ್ಮನ ಚರಣಕೆ ಕನ್ನಡಿಗರು ಶರಣಾಗಿರುವರು.
ಕನ್ನಡ ನುಡಿ ಚೆಂದ ನಾಡು ಚಂದ
ಕನ್ನಡ ಮಣ್ಣು ಮಣ್ಣಲ್ಲ ಅದು ಹೊನ್ನು ಆನಂದ
ಈ ಮಣ್ಣಲಿ ಹೊನ್ನು ಬೆಳೆದು ಚಿನ್ನದ ಗುಣ ಹೊಂದಿರುವವರು
ಕನ್ನಡಿಗರು ಯಾರೇ ಬರಲಿ ತನ್ನವರೆಂದು ಅಪ್ಪಿಕೊಂಡು
ಪ್ರೀತಿಸುವ ಗುಣ ಈ ಕನ್ನಡ ಮಣ್ಣಲ್ಲಿಹುದು.
ಎಂಟು ಜ್ಞಾನಪೀಠ ಪ್ರಶಸ್ತಿ ನಮ್ಮ ಕನ್ನಡಕ್ಕೆ
ಬಂದು ಕನ್ನಡಾಂಬೆಯ ಮುಡಿ ಸೇರುವೆ
ಈ ನೆಲ, ಜಲ,ವಾಯು, ಅಗ್ನಿ ಯಲು
ನಮ್ಮ ಕನ್ನಡ ರಾರಾಜಿ ಸುತ್ತಿದೆ ಕನ್ನಡ ಮಾತಾಡುವುದೇ
ಸೌಭಾಗ್ಯ ಕನ್ನಡ ಮಣ್ಣಲ್ಲಿ ಜನಿಸಿರುವುದೇ ನಮ್ಮ ಪುಣ್ಯ.
ನಾವು ಪ್ರಾಣ ಬಿಟ್ಟೆವು ಆದರೆ
ಕನ್ನಡತನವನ್ನು ಬಿಡಲಾರೆವು
ನಮ್ಮ ಕನ್ನಡ ತನಕೆ ಅವಮಾನಿಸಿದವರನ್ನು
ಸೀಳದೆ ಬಿಡಲಾರೆವು ಕನ್ನಡಕ್ಕಾಗಿ
ಕನ್ನಡ ಅಭಿಮಾನಿಯಾಗಿ ಜೀವ ಕೊಟ್ಟೆವು.
ಕನ್ನಡ ಸುದ್ದಿಗೆ ಬಂದರೆ ಸುಮ್ಮನೆ ಬಿಡೆವು
ಕನ್ನಡ ಪದಕ್ಕೆ ಅವಮಾನಿಸಿದರೆ ನಾಲಿಗೆ ಕಿತ್ತೆವು
ಕನ್ನಡ ನೆಲ,ಜಲ,ನಾಡು ನುಡಿ ನಮ್ಮ ಸಂಪತ್ತು
ಆ ಹೊನ್ನಿನ ಸಂಪತ್ತಿಗೆ ಕೈ ಹಾಕಿದರೆ ಕೈ ಕತ್ತರಿಸುವೆವು.
ನಾವು ತಿನ್ನೋ ಅನ್ನ ಕನ್ನಡದು
ಕುಡಿಯೋ ಜಲ ಸೇವಿಸು ಗಾಳಿ ಕನ್ನಡದು
ಕನ್ನಡ ನಾಡು ನಮ್ಮ ಸ್ವತ್ತು ಕನ್ನಡಿಗರ
ಉಸಿರಿರುವತನಕ ಕನ್ನಡಕ್ಕೆ ಕನ್ನಡಾಂಬೆಗೆ ಇಲ್ಲ ಆಪತ್ತು.
ಜ್ಯೋತಿ ಸಂಜು ಮುರಾಳೆ
ಜಿಲ್ಲೆ ಬೆಳಗಾವಿ
ತಾಲೂಕು ಚಿಕ್ಕೋಡಿ
ಸಾಕಿನ್ ಕಬ್ಬೂರ