ದೈತ್ಯ ಬಡತನ ರಣಕಹಳೆನುದಿದೆ
ಕೊನೆ ಗಾಣಿಸುವೆಯಾ ಹಿರಿಯ
ಕಾಲ ಕಂದರನ ನಿತ್ಯ ನಿರಂತರ
ಕಾಟವನು ಮಾಣಿಸುವೆಯಾ ಹಿರಿಯ
ತಗ್ಗು ದಿನ್ನೆಯ ಮೇಲೆ ಹೆಜ್ಜೆಗಳು
ತಾಳ ತಪ್ಪುತ್ತಿವೆ ಅದೆಕೋ
ಪ್ರನ್ನವ ತಂದು ತೃಷೆಯನ್ನು
ತಣಿಸುವೆಯಾ ಹಿರಿಯ
ಕರಣಗಳು ತ್ರಾಣವ ಕಳೆದುಕೊಂಡು
ಸೊರಗಿವೆ ಇಂದದೆಕೋ
ಸಂಗಾತಿಯ ಸನಿಹ ಬಯಸಿದೆ
ಹೃದಯಪೋಣಿಸುವೆಯಾ ಹಿರಿಯ
ತಪೋವನವಿಡಿ ಕಾಟಕನಂತಲಿದು
ಬಳಲಿ ಬೆಂಡಾಗಿರುವೆನು
ಕಮ್ಮಗಿನ ಕಾಟೆಯನು ತಂದು
ಉಣಿಸುವೆಯಾ ಹಿರಿಯ
ಯೌವನವು ಸ್ಥಿರವಲ್ಲ
ರಣರಣಕ ಕೊನೆಯಿಲ್ಲ
“ಸಾತ್ವಿಕ” ನ ಅನುಭವದ
ಸಾರವನ್ನು ಬಣ್ಣಿಸುವೆಯಾ ಹಿರಿಯ.
ಕಾಲಕಂಧರ —ಶಿವ
ಪ್ರನ್ನವ –ತಿಳಿನೀರು
ಕಾಟೆ –ಗಂಜಿ ಅಂಬಲಿ
ರಣರಣಕ—ಪ್ರೇಮ ಕಾತರತೆ
ಸೋಮಶೇಖರ ಎನ್ ಬಾರ್ಕಿ
ರಾಜ್ಯಶಾಸ್ತ್ರ ಉಪನ್ಯಾಸಕರು
ಬೇವೂರ, ಬಾಗಲಕೋಟೆ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Add to basket
- ವಚನ ವಿಶ್ಲೇಷಣೆ
ವಚನ ಮಂದಾರ
- ₹100.00
-
- Sale! Add to basket
- ಕನ್ನಡ ಪುಸ್ತಕಗಳು (Kannada Books )
Manase Relax Please ಮನಸೇ ರಿಲ್ಯಾಕ್ಸ್ ಪ್ಲೀಸ್
- Original price was: ₹150.00.₹140.00Current price is: ₹140.00.

