ಕಥಾನುಭೂತಿ – ಸ್ಫೂರ್ತಿದಾಯಕ ಕಥೆಗಳು
₹175.00
ಸ್ಫೂರ್ತಿದಾಯಕ ಕಥೆಗಳ ಸಂಕಲನ.
| Book Details |
|---|
| Author : ಶ್ರೀಧರ ದೊಡ್ಡಮನಿ |
| Publisher : ಕದಂಬ ಪ್ರಕಾಶನ |
| ISBN : 9789395129190 |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಇಂದಿನ ಯಾಂತ್ರಿಕತೆಯ ಬಿರುಗಾಳಿಗೆ ಸಿಲುಕಿ ಅಸ್ತವ್ಯಸ್ತಗೊಂಡಿರುವ ಬದುಕಿಗೆ ಸಾಂತ್ವನದ ಸ್ಪರ್ಶವನ್ನು ನೀಡುವ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವ ಅಪರೂಪದ ಕಥಾಗುಚ್ಛವೇ ‘ಕಥಾನುಭೂತಿ’ (ಸ್ಫೂರ್ತಿದಾಯಕ ಕಥೆಗಳು). ಅಹಂಕಾರದ ಮದವೇರಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುವ ಪ್ರವೃತ್ತಿಗಳಿಗೆ ಎಚ್ಚರಿಕೆಯ ಗಂಟೆಯಾಗಿ ನಿಲ್ಲುವ ಈ ಕಥೆಗಳು, ಮನುಷ್ಯತ್ವದ ಹಾದಿ ತಪ್ಪಿದವರಿಗೆ ಸನ್ಮಾರ್ಗವನ್ನು ತೋರುವ ಜೀವನದ ದಾರಿದೀಪಗಳಾಗಿವೆ. ಬದುಕಿನ ನಿಜ ನೆಲೆಗಳನ್ನು ತಾತ್ವಿಕ ಹಾಗೂ ಭಾವನಾತ್ಮಕ ನೆಲೆಯಲ್ಲಿ ಗ್ರಹಿಸುತ್ತಾ, ಸ್ವಾರಸ್ಯಕರ ಸನ್ನಿವೇಶಗಳ ಮೂಲಕ ಓದುಗರ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆಯನ್ನು ಮೂಡಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲ ವಯೋಮಾನದವರೂ ಓದಿ ಆನಂದಿಸುವುದರ ಜೊತೆಗೆ, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಸಾರ್ವಕಾಲಿಕ ನೈತಿಕ ಮೌಲ್ಯಗಳನ್ನು ಈ ಕೃತಿಯು ಗರ್ಭೀಕರಿಸಿಕೊಂಡಿದೆ. ಸರಳ, ಸುಂದರ ಹಾಗೂ ಪ್ರೌಢ ಶೈಲಿಯಲ್ಲಿ ಕಥೆಗಳನ್ನು ಹೆಣೆಯುವ ಮೂಲಕ ಲೇಖಕ ಶ್ರೀಧರ ದೊಡ್ಡಮನಿ ಅವರು ತಮ್ಮ ವಿಶೇಷ ಸಾಹಿತ್ಯಿಕ ಪರಿಣತಿಯನ್ನು ಈ ಕೃತಿಯಲ್ಲಿ ಮೆರೆದಿದ್ದಾರೆ. ಇಂದಿನ ಆಧುನಿಕ ಜನಜಾಟದ ಬದುಕಿಗೆ ನೆಮ್ಮದಿಯ ನೆಲೆಗಟ್ಟನ್ನು ಒದಗಿಸುವ ಈ ಅಮೂಲ್ಯ ಸಾಹಿತ್ಯ ಕೃತಿಯು ಮನ, ಮನೆ ತಲುಪಿ, ಯಶಸ್ಸಿನ ಶಿಖರ ಏರಲಿ ಎಂದು ಹೃತೂರ್ವಕವಾಗಿ ಹಾರೈಸುತ್ತೇನೆ.
– ಮಹಾಂತೇಶ
ಸಂಧಿಗೋಡಪರಿಸರ ಪ್ರೇಮಿಗಳು
ಹಾಗೂ ಉಪನ್ಯಾಸಕರು,ಸ. ಪ.ಪೂ. ಕಾಲೇಜು, ಚಿಕ್ಕವಾಡ



Reviews
There are no reviews yet.