You are currently viewing ವೀರ ವನಿತೆ ಕಿತ್ತೂರು ಚೆನ್ನಮ್ಮ

ವೀರ ವನಿತೆ ಕಿತ್ತೂರು ಚೆನ್ನಮ್ಮ

ಬೆಳಗಾವಿ ಜಿಲ್ಲೆ ಕಾಕತಿ ಗ್ರಾಮದಲ್ಲಿ ಜನಿಸಿದವರು
ದೇಸಾಯಿ ಪದ್ಮಾವತಿ ದಂಪತಿಯ ಪುತ್ರಿಯಿವರು
ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರು
ವೀರ ಕುವರಿ ಕಿತ್ತೂರಿನ ರಾಣಿ ಚೆನ್ನಮ್ಮಯಿವರು

ಕಿರಿಯ ವಯಸ್ಸಿಗೆ ಕುದುರೆ ಸವಾರಿ ಕಲಿತವರು
ಕತ್ತಿ ವರಸೆ ಮತ್ತು ಬಿಲ್ವಿದ್ಯಾ ಪ್ರವೀಣೆಯಿವರು
ರಾಜಾ ಮಲ್ಲಸರ್ಜ ಅವರ ಧರ್ಮ ಪತ್ನಿಯಿವರು
ಭಾರತದ ವೀರ ಮಹಿಳಾ ಆಡಳಿತಗಾರ್ತಿಯಿವರು

ಕನ್ನಡ ನಾಡಿನ ಧೀಮಂತ ಹೋರಾಟಗಾರ್ತಿಯಿವರು
ಕರ್ನಾಟಕದ ಜಾನಪದ ನಾಯಕಿಯೆಂದು ಪ್ರಖ್ಯಾತರು
ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿಯಾಗಿ ಮಿನುಗಿದವರು
ಸ್ವಾತಂತ್ರ್ಯ ಪ್ರೇಮಿಯೆಂಬ ಪಟ್ಟವನ್ನು ಪಡೆದವರು

ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದವರು
ರಣರಂಗದಲ್ಲಿ ರಣಚಂಡಿಯಾಗಿ ಶತ್ರುಗಳನ್ನು ಚಂಡಾಡಿದವರು
ಕೆಚ್ಚೆದೆಯಿಂದ ಹೋರಾಡಿ ಜಯಿಸಿ ಮಡಿದ ವೀರಾಗ್ರಣಿಯಿವರು
ಐತಿಹಾಸಿಕ ಪುಟಗಳಲ್ಲಿ ರಾರಾಜಿಸಿದ ವೀರ ವನಿತೆಯಿವರು

ಪೂರ್ಣಿಮಾ ರಾಜೇಶ್
ಕಾವ್ಯ ನಾಮ- ಬಸು ಮಲ್ಕಿ
ಹವ್ಯಾಸಿ ಬರಹಗಾರ್ತಿ, ಕವಯಿತ್ರಿ
ಬೆಂಗಳೂರು









Leave a Reply