You are currently viewing ಗಝಲ್

ಗಝಲ್

ಮನದ ಬಯಕೆಗಳನ್ನು ಕೇಳುವೆಯಾ ಗೆಳೆಯ
ಕಣ್ಣಂಚಿನ ಕನಸುಗಳ ನೋಡುವೆಯಾ ಗೆಳೆಯ

ಆಮಂತ್ರಣವಿಲ್ಲದೆ ಹೃದಯದರಮನೆಗೆ ಬಂದೆ ಏಕೆ
ಅನುಮತಿಸಿ ಕನಿಕರಿಸಿ ಕರೆಯುವೆಯಾ ಗೆಳೆಯ

ಎದೆಲಿ ವಿರಹಬೆಂಕಿ ಹೊತ್ತಿ ಉರಿಯುತಿದೆ
ಹೊತ್ತಿದ ಬೆಂಕಿಯನ್ನು ನಂದಿಸುವೆಯಾ ಗೆಳೆಯ

ತೊಟ್ಟಿಲಲ್ಲಿ ಪ್ರೀತಿಯ ಹಸುಗೂಸು ಮಲಗಿಸಿದೆ ನೋಡು
ದ್ವೇಷದ ಜೋಗುಳ ಹಾಡದೆ ಬಂದು ಸೇರುವೆಯಾ ಗೆಳೆಯ

ಈ “ಸಾತ್ವಿಕ”ನ ಪ್ರೇಮಗೀತೆಯ ಧ್ವನಿಗೆ ಧ್ವನಿ
ಸೇರಿಸಿ
ಬಾಳವೀಣೆಯ ತೋಷದಿ ನುಡಿಸುವೆಯಾ ಗೆಳೆಯ

ಸೋಮಶೇಖರ ಎನ್ ಬಾರ್ಕಿ
ರಾಜ್ಯಶಾಸ್ತ್ರ ಉಪನ್ಯಾಸಕರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.