ಸೆಲ್ಫಿ ಬೇಡ ಅವಳಿಗೊಂದು ಕುಲ್ಫಿ ಕೊಡಿಸಿ
ಪ್ರತಿ ವರ್ಷ ಮೇ ತಿಂಗಳಿನ ಎರಡನೆಯ ಭಾನುವಾರ ಅಂತರಾಷ್ಟ್ರೀಯ ತಾಯಂದಿರ ದಿನವಂತೆ.ಅವತ್ತು ಎಲ್ಲರೂ ಅವರವರ ತಾಯಿಗೆ ಶುಭಾಶಯಗಳನ್ನು ತಿಳಿಸಿ,ನೆನಪಿನ ಕಾಣಿಕೆಗಳನ್ನು ನೀಡಿ ಖುಷಿಪಡಿಸಬೇಕಂತೆ.ಎಷ್ಟು ವಿಚಿತ್ರ ಅಲ್ವಾ?ತಾಯಿಯನ್ನು ಖುಷಿಯಾಗಿ ನೋಡಿಕೊಳ್ಳಲು ತಾಯಂದಿರ ದಿನವೇ ಆಗಬೇಕೇ?ಒಂದು ನಿಮಿಷ ಎಲ್ಲರೂ ನಿಮ್ಮ ಮನದಾಳಕ್ಕೆ ಇಳಿದು ಯೋಚಿಸಿ…