You are currently viewing ಮಾತಿಗಿಳಿದ ಹಣತೆ (ಕವನ ಗುಚ್ಛ)

ಮಾತಿಗಿಳಿದ ಹಣತೆ (ಕವನ ಗುಚ್ಛ)

ರಚನೆ =ಶ್ರೀಮತಿ ಮಮತಾ ಚ ದೂಡ್ಡಮನಿ (ಶಿಕ್ಷಕಿಯರು)

ಪ್ರಕಾಶಕರು= ಸುಷ್ಮಾ ಪ್ರಕಾಶನ ಗದಗ
ಮುದ್ರಕರು= ಸಂಕೇಶ್ವರ ಪ್ರಿಂಟರ್ಸ ಗದಗ

ಬೆಲೆ=100:00ರೂ
ಸಂಪರ್ಕ ಸಂಖ್ಯೆ =8722279283

ಸಂವೇದನಾಶೀಲತೆ ಸೃಜನಶೀಲತೆಗೆ ರಾಜಮಾರ್ಗ ವೃತ್ತಿಯಿಂದ ಶಿಕ್ಷಕಿಯಾಗಿ ಪ್ರವೃತ್ತಿಯಿಂದ ಕವಿಯಿತ್ರಿಯಾಗಿರುವ ಸಹೋದರಿ ಶ್ರೀ ಮತಿ ಮಮತಾ ಚ ದೊಡ್ಡಮನಿಯವರು ಸರಳಹಾಗೂ ಸುಂದರ ಪದಗಳನ್ನು ಬಳಸಿ ಕವಿತೆಗಳನ್ನು ಕಟ್ಟುವುದರಲ್ಲಿ ನಿಸ್ಸೀಮರು.
ಮೊದಲ ಕವನ ಸಂಕಲನದಲ್ಲೇ ಬೆರಗು ಮೂಡಿಸುವ ಕವಿತೆಗಳು ಓದುಗರನ್ನು ಆಯಸ್ಕಾಂತದಂತೆ ಸೆಳೆಯುತ್ತವೆ, ಬದುಕಿನ ಎಲ್ಲ ಮಜಲುಗಳನ್ನು ಅನುಭವಿಸಿ ಅದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿ ಸಿಂಹಾವಲೋಕನ ಮಾಡಿದ್ದಾರೆ. ಕವಿತೆಗೇನು ಬೇಕು ಒಳಗಡೆ ಹದವಿದ್ದರೆ ಪದ ಕಟ್ಟಬಹುದು ಎನ್ನುವ ಮಾತಿನಂತೆ ಅವರ ಹಣತೆ ಮಾತಾನಾಡುತ್ತಿವೆ ಮಾತನಾಡುತ್ತಲೆ ಸುಂದರ ಅನುಭೂತಿಯನ್ನು ನೀಡುತ್ತವೆ

ಒಟ್ಟು81 ಕವನಗನ್ನು ಒಳಗೊಂಡ ಕವನ ಸಂಕಲನದ ಪ್ರತಿಯೊಂದು ಕವನವು ಕೂಡಾ ಮನಮುಟ್ಟುತ್ತವೆ ಮತ್ತೇ ಮತ್ತೇ ಓದಬೇಕೆನ್ನುವ ತವಕ ಹುಟ್ಟಿಸುತ್ತವೆ

ಗಜಾನನ ಸ್ತುತಿಯೊಂದಿಗೆ ಪ್ರಾರಂಭವಾಗುವ ಕವನದ ಸಾಲು

ಗರಿಕೆ ಹುಲ್ಲು ತಂದಿರುವೆ
ಅನುದಿನ ನಿನ್ನನು
ಪೂಜಿಸುವೆ
ಭಕ್ತಿಯಲಿ ಮೋದಕವ ಅರ್ಪಿಸುವೆ
ಸ್ವೀಕರಿಸು ಬಾರೋ
ಗಣೇಶನೆ

ವಿಘ್ನ ವಿನಾಶಕನ ಪ್ರಾರ್ಥನೆ ಯೊಂದಿಗೆ ಆರಂಭದ ಕವಿತೆಯ ನಂತರ ಬಾಳಿಗೆ ಬೆಳಕು ನೀಡಿದ ಅವ್ವನಕುರಿತಾದ ಕವಿತೆ ಮನಕೆ ಮುದ ನೀಡುತ್ತದೆ

ಅಪ್ಪನಿಲ್ಲದ ಈ ಬಾಳ ಬಂಡಿ
ಬಿಡದೆ ಸಾಗಿಸಿದೆ ಅವ್ವ ಈ ಜೀವನ ಬಂಡಿ
ನನ್ನನ್ನು ಸಲುಹಿದೆ ಕೂಲಿನಾಲಿ ಮಾಡಿ
ಕಷ್ಟಗಳಿಗಂಜದೆ ದಡಿದು ಸಾಕಿದೆ ನೀ ಅನ್ನನೀಡಿ

ಹಡೆದವ್ವನನ್ನು ನೆನೆದು ಭಾವ ಪರವಶರಾಗಿ ಬರೆದ ಸಾಲುಗಳು ಮನ ಕಲಕುವಂತಿವೆ

ತವರಿನ ಸಿರಿಯನ್ನು ಬಣ್ಣಿಸುವ ಕವಿತೆ ಮರೆತು ಹ್ಯಾಂಗರಲಿ ತವರಿನ ಹಬ್ಬ

ನಾಗರ ಪಂಚಮಿ ನಾಡಿಗೆ ದೊಡ್ಡದು
ನಾಡ ನಾರಿಯರಿಗೆಸಂಭ್ರಮದ ಹಬ್ಬವು
ಮಾಳಿಗೆ ಏರಿ ತವರೀನ ದಾರಿನೋಡುತ್ತಾ
ಹೆತ್ತವರ ನೆನಪಾಗಿ ಉದುರತಾವ ಕಣ್ಣೀರು




ಹೀಗೆ ತವರೂರನ್ನು ನೆನೆವ ಪರಿ ಸಾಲುಗಳನ್ನು ಸುಂದರಗೊಳಿಸುತ್ತಾ ಸಾಗುತ್ತವೆ

ಹೆಣ್ಣೆಂದರೇನು? ಎನ್ನುವ ಪ್ರಶ್ನೆಗೆ ಸರಳ ಉತ್ತರವನ್ನು ಕವಿಯಿತ್ರ ನೀಡಿದ್ದಾರೆ

ಹೆಣ್ಣೆಂದರೆ ಕತ್ತಲೆ ಬದುಕಿಗೆ ಜ್ಞಾನ ದ ಬೆಳಕು ನೀಡುವ ಹಣತೆ
ಸುಜ್ಞಾನದ ಜ್ಯೋತಿ ಬೆಳಗುವ ಶಾರದಾಮಾತೆ
ಮಗುವಿಗೆ ಅಕ್ಷರ ಕಲಿಸುವ ಮೊದಲ ಗುರು ಮಾತೆ
ಇವಳು ಕೊಡುವ ಪ್ರೀತಿ ರಸಬಾಳೆ ಹಣ್ಣಂತೆ

ಹೀಗಯೇ ಮಾತಿಗಿಳಿದ ಹಣತೆ ಮಾತನಾಡುತ್ತಲೇ ಸಾಗುತಿದೆ

ತ್ಯಾಗಮಯಿ, ದಾನಶೂರಕರ್ಣ, ಅವಳೆಂದರೆ, ಮಲೆನಾಡ ಸಿರಿ, ಹೋಳಿ, ಕಣ್ಣಾಮುಚ್ಚಾಲೆ, ಶ್ರೀರಾಮ, ಏನಿಲ್ಲ ಏನಿಲ್ಲ, ಚಂದ್ರಯಾನ ಯಶಸ್ಸು, ರೖತನಿಗೆ ಹೆಣ್ಣು ಕೊಡಿ, ಇವರು ನಮ್ಮವರು, ರಕ್ಷಾ ಬಂಧನ,
ಈ ಶೀರ್ಷಿಕೆ ಹೊತ್ತ ಕವನಗಳು ಓದಿಸಿಕೊಂಡು ಸಾಗುತ್ತವೆ

ಈ ಕವನ ಸಂಕಲನಕ್ಕೆ ಕ. ಸಾ ಪ ದ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ವಿವೇಕಾನಂದಗೌಡ ಪಾಟೀಲರು ಮುನ್ನುಡಿ ಬರೆದು ಕವನ ಸಂಕಲವನ್ನು ಚಂದಗಾಣಿಸಿದ್ದಾರೆ
ಕವಿ ಎ, ಎಸ್ ಮಕಾನದಾರ್ ಬೆನ್ನುಡಿ ಬರೆದು ಶುಭ ಹಾರೖಸಿದ್ದಾರೆ

ಕೊಂಡೋದಲೇಬೇಕಾದ ಈ ಪುಸ್ತಕವನ್ನು ಕೊಂಡೋದಿ ಓದುಗರು ಕವಿಮನಕೆ ಪ್ರೋತ್ಸಾಹಿಸಬೇಕೆಂದು ನನ್ನದೊಂದು ಮನವಿ
ಇನ್ನಷ್ಟು ಹೆಚ್ಚು ಅವರ ಕೃತಿಗಳು ಅಚ್ಚಾಗಿ ಕನ್ನಡ ಸಾರಸ್ವತ ಲೋಕ ತಲುಪಲಿ ಎಂದು ಶುಭ ಹಾರೖಸುತ್ತೇನೆ

ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ









Leave a Reply