ಮೈಸೂರ ಚೆಲುವ ನೋಡು ಬಾರಾ
ಸೌಂದರ್ಯದ ಸಿರಿ ಸವಿಯ ಬಾರಾ
ಹಸಿರಿನ ಹಾದಿಯ ನಡುವೆ ನಡೆದು
ಮನದ ಮಾತನು ಕೇಳಿ ಬಾರಾ
ಅರಮನೆಯ ವೈಭವ ನೋಡು ಬಾರಾ
ಇತಿಹಾಸದ ಪುಟವ ತೆರೆದು ಬಾರಾ
ರಾಜರ ಕನಸಿನ ನೆನಪಿನೊಳಗೆ
ಸಂಸ್ಕೃತಿಯ ಬೆಳಕು ಕಾಣು ಬಾರಾ
ಬೃಂದಾವನದ ನಗುವ ನೋಡಾ
ಕಾರಂಜಿಯ ಹಾಡನು ಕೇಳಿ ಬಾರಾ
ಹೂವಿನ ಪರಿಮಳ ಹೃದಯ ತುಂಬಿ
ಹೊಸ ಉಲ್ಲಾಸವ ಪಡೆದು ಬಾರಾ
ದಸರೆಯ ವೈಭವ ಕಣ್ತುಂಬಿಕೊಳ್ಳ
ಜನಮನದ ಸಂಭ್ರಮ ಸವಿದು ಬಾರಾ
ಕಲೆ ಸಾಹಿತ್ಯದ ಹೆಮ್ಮೆಯ ನಾಡಲ್ಲಿ
ಕನ್ನಡದ ಸೊಗಡನು ಅರಿತು ಬಾರಾ
ಕಾವೇರಿ ತಂಗಾಳಿ ತಾಕಿದಾಗ
ಮನದ ನೋವುಗಳ ಮರೆತು ಬಾರಾ
ಪ್ರಕೃತಿಯ ಮಡಿಲ ಸವಿಯುತ್ತಾ
ನೆಮ್ಮದಿಯ ಕ್ಷಣವ ಪಡೆದು ಬಾರಾ
ಮೈಸೂರ ನಗರದ ಮೋಡಿ ನೋಡಿ
ಮತ್ತೆ ಬರಬೇಕೆನಿಸುವ ಬಾರಾ
ಸೌಂದರ್ಯದ ಈ ಸಿರಿ ನಾಡಿಗೆ
ಪ್ರೀತಿಯ ಹೆಜ್ಜೆಯ ಇಟ್ಟು ಬಾರಾ
ಬಸವ ವಿನಯ್(ವಿಪಿ)
ಯುವ ಕವಿ, ಸಾಹಿತಿ. ಹರವೆ
ಚಾಮರಾಜನಗರ