ಅತ್ತೆ – ಸೊಸೆ-ಮಗಳು
ಪ್ರಪಂಚದ ಎಲ್ಲಾ ಮಹಿಳಾ ಮಣಿಗಳು ಹೇಗೆ, ಏಕೆ, ಸ್ವಾತಂತ್ರ ಅನುಭವಿಸುತ್ತಿದ್ದಾರೆ. ಅನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಸ್ವಾತಂತ್ರ ಅವರಿಗೆ ಯಾರು ಕೊಡಬೇಕಾಗಿಲ್ಲ. ಅವರೆ ಬಲಿಷ್ಠರು ಆಗಿದ್ದಾರೆ. ಪ್ರತಿ ಕುಟುಂಬದಲ್ಲಿ ಮೊಟ್ಟ ಮೊದಲು ಅತ್ತೆ ಸೊಸೆಯ ಪಾತ್ರಗಳೇ ಮುಖ್ಯ ಸ್ಥಾನ ಪಡೆದಿವೆ. ಅದಕ್ಕೆ ಹೇಳುವುದು ಸೊಸೆಯಂದಿರು ಸಾಮ್ರಾಜ್ಯದಲ್ಲಿ ಅಂತಾ. ಪ್ರತಿ ಕುಟುಂಬದಲ್ಲಿ ಮಹಿಳೆ ಮೊದಲು ಮಗಳಾಗುವಳು. ನಂತರ ತಾಯಿ, ಅತ್ತೆ ಸೊಸೆಯ ಪಟ್ಟ ಗಳಿಸುವಳು. ಇಲ್ಲಿ ಯಾರದು ಹೆಚ್ಚು ಪಾರುಪತ್ಯ ಅಂದರೆ. ಅತ್ತೆಯಾಗಲು ಗಂಡು ಮಗುವಿಗೆ ಜನ್ಮ ನಿಡಬೇಕು.ಸೊಸೆಯಗಳು ಬೇರೊಂದು ಮನೆಯ ಹೊಸಿಲು ದಾಟಬೇಕು. ಆದರೆ ಮಹಿಳೆ ಒಂಟಿಯಾಗಿ ಬೇರೊಂದು ಮನೆತನಕ್ಕೆ ಹೋಗಿ ಅಲ್ಲಿ ಸ್ವಾತಂತ್ರ ಗಳಿಸುವುದು, ಬಳಸುವುದು, ಉಳಿಸುವುದು ಸುಲಭದ ಮಾತಲ್ಲ.
ಆ ಮನೆತನದಲ್ಲಿ ಈಗಾಗಲೇ ಅತ್ತೆ ಅನ್ನುವ ಮಹಿಳೆ ಸೊಸೆಯಾಗಿ ಬಂದಿರುತ್ತಾಳೆ. ಸoಯಮ, ತಾಳ್ಮೆ ಬೇಕು. ಸ್ವಾತಂತ್ರ್ಯ ಬರಲು ಬಹಳ ಸಮಯ ಹಿಡಿಯುತ್ತದೆ. ಆದರೆ ಸಾರ್ವಜನಿಕ ಜೀವನದಲ್ಲಿ ಮಹಿಳೆ,ರಾಷ್ಟ್ರಪತಿ,ಪ್ರಧಾನಿ,ಅಧಿಕಾರಿ,ಮುಖ್ಯಮಂತ್ರಿ,ನ್ಯಾಯಾಧೀಶ, ನೇಗಿಲ ಯೋಗಿಯ ಪತ್ನಿ, ಮಾದ್ಯಮ ವರ್ಗದ ಮನೆತನದ ಪತ್ನಿ, ಅತ್ತೆ ಸೊಸೆ ಆಗಬಹುದು. ಸಾರ್ವಜನಿಕ ಬದುಕಿನಲ್ಲಿ ಹಲವಾರು ಪ್ರಶಸ್ತಿ ಪುರಸ್ಕೃತ ಗೌರವಗಳು ಬರಬಹುದು.ಆದರೆ ಮನೆತನದಲ್ಲಿ ಅವಳ ಜವಾಬ್ದಾರಿ ಜಾಸ್ತಿ. ಇಲ್ಲಿ ಅಳಿಯ ಮಾವ, ಮಗ ಇವರ ಪಾತ್ರಗಳು ಬಹಳ ಗೌಣ. ಸ್ವಾತಂತ್ರ ಅಂದರೆ ಏನು ಅತ್ತೆ, ಸೊಸೆ, ತಾಯಿ, ಮಗಳು, ಪತ್ನಿ, ನಾದಿನಿ, ಒರಗಿತ್ತಿ, ಇವರೆಲ್ಲಾ ತಾಳ್ಮೆಯಿಂದ ಸoಯಮದಿoದ ಇದ್ದು ಜೀವನ ಶೈಲಿ ರೂಪಿಸಿಕೊಳ್ಳಬೇಕು.
ರಾಜೇಂದ್ರ ಹೆಗಡೆ
ಹಾವೇರಿ
Mo,8310384540