You are currently viewing ಪ್ರೀತಿ ಇಲ್ಲ ಎಂದ ಮೇಲೆ

ಪ್ರೀತಿ ಇಲ್ಲ ಎಂದ ಮೇಲೆ

ಮನವು ಹೇಗೆ ಅರಳುವುದು
ಆಸೆ ಹೇಗೆ ಹುಟ್ಟುವುದು
ಕನಸು ಹೇಗೆ ನನಸಾಗುವುದು
ಬದುಕು ಹೇಗೆ ಬದಲಾಗುವುದು

ಪ್ರೀತಿ ಇಲ್ಲ ಎಂದ ಮೇಲೆ
ಮೈತ್ರಿ ಭಾವ ಹೇಗೆ ಬೆಳೆಯುವುದು
ಕರುಣೆಯ ಕಡಲು ಹೇಗೆ ಹರಿಯುವುದು
ಧರ್ಮದ ಮಾರ್ಗ ಹೇಗೆ ಹಿಡಿಯುವುದು
ಮನವು ನ್ಯಾಯ ನೀತಿಯಿಂದ ಹೇಗೆ ಬಾಳುವುದು

ಪ್ರೀತಿ ಇಲ್ಲ ಎಂದ ಮೇಲೆ
ಸಮುದಾಯದ ನೋವಿಗೆ ಮನ ಸ್ಪಂದಿಸುವುದೇ
ಜನರ ಕಷ್ಟಕ್ಕೆ ಹೆಗಲಾಗುವುದೇ
ಅನ್ಯಾಯದ ವಿರುದ್ಧ ಸಿಡಿದೇಳುವುದೇ

ಪ್ರೀತಿ ಇಲ್ಲ ಎಂದ ಮೇಲೆ
ದಮನಿತರ ಕೂಗಿಗೆ ಕೊರಳಾಗುವುದೇ
ಸತ್ಯದ ಮಾರ್ಗ ಅರಿಯುವುದೇ
ಪ್ರಜ್ಞೆಯ ಅರಿವು ಮೂಡುವುದೇ

ಪ್ರೀತಿ ಇಲ್ಲದ ಎಂದ ಮೇಲೆ
ಮನುಷ್ಯತ್ವದ ಪರಿಮಳ ಬೀರುವುದೇ
ದ್ವೇಷದ ಜ್ವಾಲೆ ನಂದುವುದೇ
ಜ್ಞಾನ ಜ್ಯೋತಿ ಬೆಳಗುವುದೇ
ಸಮತೆಯ ಕುಸುಮ ಉಸ್ಮೆನಿಸುವುದೇ

ಪ್ರೀತಿ ಇಲ್ಲ ಎಂದ ಮೇಲೆ
ಜಾತಿ ಭೇದಭಾವ ದೂರಾ ಗುವುದೇ
ಮೋಹಮತ್ಸರ ಅಳೆಯುವುದೇ
ನಿಸ್ವಾರ್ಥತೆ ಮನ ಬಯಸುವುದೇ
ಪರರ ಕಣ್ಣೀರು ಒರೆಸುವುದೇ

ಪ್ರೀತಿ ಇಲ್ಲ ಎಂದ ಮೇಲೆ
ಒಗ್ಗಟ್ಟಿನ ಬಲ ಅರಿಯುವರೇ
ಶಿಕ್ಷಣದ ಶಕ್ತಿ ತಿಳಿಯುವರೇ
ಸಮಾನತೆಯ ಭಾವ ಹೊಂದುವರೇ
ನೋಡುವ ದೃಷ್ಟಿ ಬದಲಾಯಿಸಿಕೊಳ್ಳುವರೇ.???

ಜ್ಯೋತಿ ಬಸವರಾಜ ಬೆಳವಿ









Leave a Reply