ಕರುಣೆ ಮೈತ್ರಿ ತೋರಿದ ಮಡಿಲು
ಅಜ್ಞಾನ ಹೋಗಲಾಡಿಸಿದ ಜ್ಞಾನದ ಕಡಲು
ಜಗಕೆ ಶಾಂತಿಯ ಬೆಳಕು ನೀಡಿದರು
ಆನಂದದ ಜೀವನಕ್ಕೆ ಮಾರ್ಗ ತೋರಿದರು
ಪಂಚಶೀಲ ಪಂಚಾಮೃತವ ಸವಿ ಸುರಿಸಿದವರು
ಅಷ್ಟಾಂಗ ಮಾರ್ಗಗಳ ಅರಿವು ಮೂಡಿಸಿದವರು
ದಶ ದಿಕ್ಕುಗಳಿಗೂ ದಶಶೀಲಗಳ ಉಪದೇಶಿಸಿದವರು
ನಾಲ್ಕು ಆರ್ಯ ಸತ್ಯಗಳ ಬೋಧಿಸಿದವರು
ಭವ ಬಂಧನಗಳ ಕಳಚಿ ಮುನ್ನಡೆದರು
ಸಕಲ ಜ್ಞಾನ ಪಡೆದು ಸಮ್ಮಾ ಸಂಬುದ್ಧರಾದರು
ಹುಣ್ಣಿಮೆಯ ಬೆಳದಿಂಗಳ ಶಾಂತಿಯ ಬೆಳಕು
ಬೌದ್ಧ ಧರ್ಮದಿಂದ ಶುಚಿಗೊಳಿಸಿದರು ಮನದ ಕೊಳಕು
ಜ್ಯೋತಿ ಬಸವರಾಜ ಬೆಳವಿ
ಹುಕ್ಕೇರಿ