You are currently viewing ಅಮ್ಮಾ

ಅಮ್ಮಾ

ಅಮ್ಮಾ ಅಮ್ಮಾ ನಮ್ಮಮ್ಮಾ
ನಮ್ಮ ಕುಟುಂಬದ ಕಣ್ಣಮ್ಮಾ
ನೀನೆಂದರೆ ಏನೋ ಹರುಷವಮ್ಮಾ
ನಿನ್ನಿಂದಲೇ ನಮ್ಮ ಬಾಳು ಬೆಳಕಮ್ಮಾ.
ನೀನೆಂದರೆ ಏನೋ ಹರುಷವಮ್ಮಾ
ನಿನ್ನಿಂದಲೇ ನಮ್ಮ ಬಾಳು ಬೆಳಕಮ್ಮಾ.

ಜನ್ಮ ನೀಡಿದ ನೀ ಜನ್ಮದಾತೆ
ನಡೆ-ನುಡಿ ಕಲಿಸಿದ ದೈವಮಾತೆ
ಅಮ್ಮ ನೀ ನೀಡಿದ ಮುತ್ತು
ನಮ್ಮ ಬಾಳಿಗೆ ಸಿಹಿ ತುತ್ತು
ನೀನೆಂದರೆ ಏನು ಹರುಷವಮ್ಮಾ
ನಿನ್ನಿಂದಲೇ ನಮ್ಮ ಬಾಳು ಬೆಳಕಮ್ಮಾ.

ನಿನ್ನ ಮಮತೆಯ ಮಡಿಲು ಹೂವಮ್ಮಾ
ನಿನ್ನ ಹರಕೆಯು ಬಾಳಿಗೆ ಗಂಧವಮ್ಮಾ
ನಿನ್ನ ಕರುಳಿನ ಕುಡಿಗೆ ನೀ ಅಮೃತವಮ್ಮಾ
ನಿನ್ನ ತ್ಯಾಗಕ್ಕೆ ನನ್ನ ಕೋಟಿ ವಂದನೆಗಳಮ್ಮಾ
ನೀನೆಂದರೆ ಏನೋ ಹರುಷವಮ್ಮಾ
ನಿನ್ನಿಂದಲೇ ನಮ್ಮ ಬಾಳು ಬೆಳಕಮ್ಮಾ.

ಅಮ್ಮ ನೀನೆಂದರೆ ನಮಗೆ ಭಯ ಭಕ್ತಿ
ಅಮ್ಮ ನೀನೇ ನಮಗೆ ಶಕ್ತಿ
ನೀನು ಸಹನೆಯ ಮೂರ್ತಿ
ನಿನ್ನಿಂದಲೇ ಈ ಜಗಕೆ ಕೀರ್ತಿ
ನೀನೆಂದರೆ ಏನೋ ಹರುಷವಮ್ಮಾ
ನಿನ್ನಿಂದಲೇ ನಮ್ಮ ಬಾಳು ಬೆಳಕಮ್ಮಾ.

ಜ್ಯೋತಿ ಬಸವರಾಜ ಬೆಳವಿ









Leave a Reply