ಬಿಜಾಪುರದ ಬಸವನ ಬಾಗೇವಾಡಿ ನಕ್ಷತ್ರ
ಸಮಾಜ ಪರಿವರ್ತನೆಗೆ ಪ್ರವರ್ತಕ ಪುತ್ರ
ಮಾದರಸ ಮಾದಲಾಂಬಿಕೆಯರ ಸುತನಾಗಿ
ವಿಶ್ವಗುರು ಬೆಳಕಾದ ಜಗಕೆ ಬಸವಣ್ಣನಾಗಿ
ಬಿಜ್ಜಳನ ಭಂಡಾರದ ಅಧಿಕಾರಿಯಾಗಿ
ಮಂತ್ರಿ ಹುದ್ದೆ ತ್ಯಜಿಸಿ ತಾನಾದ ಯೋಗಿ
ಅನುಭವ ಮಂಟಪ ಸ್ಥಾಪನೆಯ ಮಾಡಿ
ಮಾನವೀಯ ಮೌಲ್ಯ ವೃದ್ಧಿಸಿದ ನೋಡಿ
ಕಲ್ಯಾಣ ನಾಡಲ್ಲಿ ಕ್ರಾಂತಿ ಮಾಡಿದ ಕಿಡಿ
ಆತ್ಮ ಪರಿಶುದ್ಧತೆಗೆ ಭಕ್ತಿ ಮಾರ್ಗ ಹೂಡಿ
ಶಿವಶರಣರು ಜಾತಿಲಿಂಗ ತಾರತಮ್ಯ ದೂಡಿ
ಸಮಾನತೆ ಸಾರಿದರು ನಡೆನುಡಿ ಒಗ್ಗೂಡಿ
ಇಷ್ಟಲಿಂಗವ ಭಕ್ತಿಯಿಂದ ಧರಿಸಿ ನಿತ್ಯ ಜಪಿಸಿ
ಸಾವಿರಾರು ಅರ್ಥಪೂರ್ಣ ವಚನಗಳ ರಚಿಸಿ
ದೇಹವೇ ದೇಗುಲ ಸತ್ಯದ ಸರಳತೆ ಸಾಕ್ಷಾತ್ಕಾರ
ಕಾಯಕವೇ ಕೈಲಾಸ ಜಗದ ವಿಳಾಸ ಬಸವೇಶ್ವರ
ಅನ್ನಪೂರ್ಣ ಪದ್ಮಸಾಲಿ
ಶಿಕ್ಷಕಿ ,ಕೊಪ್ಪಳ
ಚಿತ್ರಕಲೆ ಬಿಡಿಸಿದ್ದು.
ಲಿಖಿತ್ ಕಾತರಕಿ
೭ ನೆಯ ತರಗತಿ
ಟಣಕನಕಲ್
ತಾ.ಜಿ.ಕೊಪ್ಪಳ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
Super
ಧನ್ಯವಾದಗಳು 🙏🏻