SKU: 9200

ಪೂರ್ಣ ಕಾವ್ಯ

120.00

Author : ಆರ್.ಪೂರ್ಣಿಮಾ ರಾಜೇಶ್

Publishers Name: HSRA ಪ್ರಕಾಶನ

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಹಸನ್ಮುಖಿಯೂ, ಸ್ನೇಹಶೀಲೆಯೂ ಅಪ್ಪಟ ಗೃಹಿಣಿಯೂ ಆದ ಪೂರ್ಣಿಮಾ ರಾಜೇಶ್ ರವರದು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿತ್ವ, ಸಮಾಜ ಸೇವಾ ಕಾರ್ಯಕರ್ತೆ ಹಾಗೂ ಮುಖಪುಟದ ಹವ್ಯಾಸಿ ಬರಹಗಾರ್ತಿ.ಕಥೆ ಚುಟುಕು ಕವನ ನ್ಯಾನೋ ಕತೆ ಲೇಖನಗಳನ್ನು ಬರೆಯುವುದರಲ್ಲಿ ಪಳಗಿದ ಕೈ. ದೇಶಭಕ್ತಿ ಗೀತೆ, ಶಿಶುಗೀತೆ, ಪ್ರಕೃತಿಗೀತೆ ಹಾಗೂ ಜಾನಪದ ಗೀತೆಗಳನ್ನು ರಚಿಸಿರುವ ಪೂರ್ಣಿಮಾ ರವರು ತಮ್ಮ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆ ಮಾಡುವುದರ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕಾವ್ಯ ಎನ್ನುವುದು ಕವಿಯ ಮನಸಿನ ಕನ್ನಡಿ ಇದ್ದಂತೆ.ಅದರಂತೆಯೇ ಪೂರ್ಣಕಾವ್ಯದಲ್ಲಿ ಬದುಕಿನ ವಿವಿಧ ಆಯಾಮಗಳನ್ನು ಭಾವನಾತ್ಮಕ ಅನುಭೂತಿಯ ನೆಲೆಯಲ್ಲಿ, ಸರಳ ಸುಂದರ ಹಾಗೂ ಸುಲಲಿತವಾದ ಭಾಷೆಯಲ್ಲಿ ತಮ್ಮ ಮನದ ಭಾವನೆಗಳನ್ನು ಕವಯಿತ್ರಿ ತೆರೆದಿಟ್ಟಿರುವ ರೀತಿ ಅನನ್ಯ ಮತ್ತು ಅಭಿನಂದನೀಯ. “ಪೂರ್ಣಕಾವ್ಯ”

ಭಕ್ತಿಗೀತೆಗಳನ್ನು ರಚಿಸಿ ಹಾಡುವುದೆಂದರೆ ಇನ್ನಿಲ್ಲದ ಪ್ರೀತಿಯನ್ನು ಹೊಂದಿರುವ ಇವರು ಅಡುಗೆ ಅರಮನೆ ಹಾಗೂ ಇನ್ನಿತರ ಅಡುಗೆ ಬಳಗಗಳಲ್ಲಿ ಹೊಸ ಪ್ರಯೋಗಗಳಿಗೆ ಆದ್ಯತೆ ಕೊಟ್ಟು ತಮ್ಮದೇ ಛಾಪನ್ನು ಉಳಿಸಿಕೊಂಡಿದ್ದಾರೆ.ಪೂರ್ಣಿಮಾ ರಾಜೇಶ್ ರವರ ‘ಪೂರ್ಣ ಕಾವ್ಯ’ ಸಂಪೂರ್ಣ ಯಶಸ್ಸು ಕಾಣಲಿ ಎಂದು ಹೃನ್ಮಃಪೂರ್ವಕವಾಗಿ ಹಾರೈಸುವೆ….

Rating This Book

Reviews

There are no reviews yet.

Be the first to review “ಪೂರ್ಣ ಕಾವ್ಯ”

Your email address will not be published. Required fields are marked *

Top Books