ನೇಸರನು ತನ್ನ ಪಥ ಬದಲಾಯಿಸುತಲಿ
ಹಿಗ್ಗುವ ಜನರಿಗೆ ಸುಗ್ಗಿಯ ತರುತಲಿ
ಬೆಳೆದ ಪೈರು ಅಂಗಳವ ಸೇರುತಲಿ
ಮಂದಹಾಸವು ಫಸಲು ಹಸನಾದ ರೈತನ ಮೊಗದಲಿ
ಎಳ್ಳು ಬೆಲ್ಲ ಕೊಬ್ಬರಿ ಕಬ್ಬು ಹಂಚುತಲಿ
ಸಂಕ್ರಾಂತಿ ಸೊಬಗು ರಂಗಿನ ಮೆರಗಲ್ಲಿ
ಅಂಗಳ ಸಿಂಗಾರಗೊಂಡಿದೆ ರಂಗೋಲಿಯ
ಚಿತ್ತಾರದಲ್ಲಿ ತನುಮನದಲಿ ಹೊಸ ಚೈತನ್ಯ ಮೂಡಲಿ
ಮಧುರ ಮಾತಲ್ಲಿ ಬಾಂಧವ್ಯ ಬೆಸೆಯುತಲಿ
ಕಹಿ ನೆನಪು ಮರೆಯಾಗಿ ಬಾಳಲ್ಲಿ ಸಿಹಿ ಅಂಕುರಿಸಲಿ
ಸಂತಸ ತುಂಬಿದ ಯಶಸ್ಸು ಜೊತೆಯಲಿ ಬರಲಿ
ವರ್ಷದ ಮೊದಲ ಹಬ್ಬ ಶುಭವ ತರಲಿ
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 💐💐
ಉಷಾ ಪ್ರಶಾಂತ್
ಸಿದ್ದಾಪುರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Add to basket
- ವಚನ ವಿಶ್ಲೇಷಣೆ
ವಚನ ಮಂದಾರ
- ₹100.00
-
- Sale! Add to basket
- ಕನ್ನಡ ಪುಸ್ತಕಗಳು (Kannada Books )
Manase Relax Please ಮನಸೇ ರಿಲ್ಯಾಕ್ಸ್ ಪ್ಲೀಸ್
- Original price was: ₹150.00.₹140.00Current price is: ₹140.00.

