ಯಾವ ಕವಿತೆ ಬರೆಯಲೇನೆ ಸಖಿ
ಒಲವ ಲತೆಯೆ ಕತೆಯ ನುಡಿಯೇ
ಕವಿತೆ ಬರೆವ ಸ್ಪೂರ್ತಿಗೆ
ಮಳೆಯ ಹನಿಯು ಮುಖದ ಚೆಲುವು
ಬೆರೆತು ನಲಿವಳೇ ಸಖಿ
ಭುವಿಯ ಬಾನು ತಬ್ಬುತಿರುವ
ತುಂತುರು ಹನಿಯು ಸಖಿ
ಹಸಿರ ಸಿರಿಯ ನಡುವೆ ಕುಣಿದು
ತೃಷೆಯ ಕಳೆದೆಯಾ ಸಖಿ
ತಂಪು ಚೆಲ್ಲಿ ಬಿಸಿಯ ಬಯಸಿ
ಮುಸುಕು ಬಿಡಳು ಈ ಸಖಿ
ಜಗದಿ ನೀನು ಸುರಿಸಿ ಸುಧೆಯ
ಕರಗಿ ಹೋದೆಯಾ ಸಖಿ
ಮೇಘ ಮುಚ್ಚಿ ಧರೆಯ ಸುತ್ತಿ
ಇಳಿದನಿಲ್ಲಿ ವರುಣ ಕೃಪೆಯೆ
ತಣಿದು ಧರೆಯು ಹೊಳೆಯ ಹೊಳಪು
ಸುಳಿಯು ಸುಳಿದಿದೆ ಸಖಿ
ಬರಲಿ ಒಮ್ಮೆ ಬಾನ ಸೂರ್ಯ
ಬೆಳಕ ನೋಡುವ ಸಖಿ
ಆರತಿ ಹೆಗಡೆ
ಉತ್ತರ ಕನ್ನಡ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Add to basket
- ವಚನ ವಿಶ್ಲೇಷಣೆ
ವಚನ ಮಂದಾರ
- ₹100.00
-
- Sale! Add to basket
- ಕನ್ನಡ ಪುಸ್ತಕಗಳು (Kannada Books )
Manase Relax Please ಮನಸೇ ರಿಲ್ಯಾಕ್ಸ್ ಪ್ಲೀಸ್
- Original price was: ₹150.00.₹140.00Current price is: ₹140.00.

