You are currently viewing ಹೊಸ ವರುಷ ತರಲಿ ಹರುಷ

ಹೊಸ ವರುಷ ತರಲಿ ಹರುಷ

ಬದಲಾಗಿಹುದು ಗೋಡೆಮೇಲಿನ
ದಿನದರ್ಶಿಕೆ ನಮ್ಮ ದಿನಚರಿಯಲ್ಲ
ಕಳೆದಿಹುದು ನಮ್ಮ ಆಯಸ್ಸು
ಕನಸುಗಳು ಕಮರಿ ಹೋಗಿಲ್ಲ

ಎರಡು ಸಾವಿರದ ಇಪ್ಪತ್ಮೂರು ವಿರಮಿಸಿತು
ದುಃಖ ದುಮ್ಮಾನ ಸುಖದ ಕ್ಷಣಗಳ
ನೆನಪಿಸಿತು ಆಗಮಿಸಿತು ಇಪ್ಪತ್ನಾಲ್ಕು
ನೋವು ಮರೆಸುವ ನಲಿವು ಬೇಕು

ಬಾಳಿನಲ್ಲಿ ಪ್ರೀತಿ- ನಗು ಯಶಸ್ಸು ತರಲಿ
ಕಳೆದ ಹೊತ್ತು ಮತ್ತೆ ಸಿಗಲಾರದು ನೆನಪಿರಲಿ
ಈ ಕ್ಷಣ ಸಂತಸದಿಂದ ಅನುಭವಿಸಿ
ಕಷ್ಟ ಬಂದರೂ ಧೃತಿಗೆಡದೇ ಎದುರಿಸಿ

ಹಣೆಬರಹದೊಂದಿಗೆ ದೇವರ ಆಶೀರ್ವಾದವೂ ಇರಲಿ
ಎಲ್ಲರಿಗೂ ಹೊಸ ವರ್ಷ ಶುಭವ ತರಲಿ
ಮನದ ಕಲ್ಮಶವೆಲ್ಲ ದೂರಾಗಿ ಬದುಕು ಹಸನಾಗಲಿ
ಒಳಿತಾಗಲಿ ಒಳಿತಿನೆಡೆ ಸಾಗಲಿ

ಉಷಾ ಪ್ರಶಾಂತ್
ಸಿದ್ದಾಪುರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.