You are currently viewing ಗೃಹಿಣಿ ಇಲ್ಲದಿದ್ದರೆ ಧರಣಿ ಇಲ್ಲ

ಗೃಹಿಣಿ ಇಲ್ಲದಿದ್ದರೆ ಧರಣಿ ಇಲ್ಲ

*ಕಾರ್ಯಸುದಾಸಿ .ಕರುಣೆ ಶು ಮಂತ್ರಿ .ರೂಪೇಷು ಲಕ್ಷ್ಮಿ,. ಭೋಜೆಶು ಮಾತಾ .ಕ್ಷಮೆಯಾ ದರಿತ್ರಿ ಶಯನೇಶು ರಂಭ.*

ಹೆಣ್ಣು ಒಬ್ಬ ತಾಯಿಯಾಗಿ. ತಂಗಿಯಾಗಿ .ಅಕ್ಕನಾಗಿ.ಹೆಂಡತಿಯಾಗಿ .ಮಗಳಾಗಿ .ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾಳೆ.
ಗೃಹಿಣಿಯಾಗಿ ಮನೆಯ ಜವಾಬ್ದಾರಿ. ಮಕ್ಕಳ ಓದು .ಅತ್ತೆ ಮಾವಂದಿರ ಸೇವೆ .ಗಂಡನ ಕೆಲಸದಲ್ಲಿ ಸಹಾಯ. ಮಾಡುವುದು ಅನೇಕ ಕೆಲಸ ಕಾರ್ಯಗಳಲ್ಲಿ ಗೃಹಿಣಿಯ ಪಾತ್ರ ಅತ್ಯಮೂಲ್ಯವಾಗಿದೆ.

ಬೆಳಿಗ್ಗೆ ಬೆಳ್ಳಿ ಚುಕ್ಕಿ ಮೂಡುವಾಗ ಶುರುವಾದ ಕೆಲಸ ರಾತ್ರಿ ಹನ್ನೊಂದು ಗಂಟೆಯಾದರೂ ಮುಗಿಯದು.
ಗೃಹಿಣೀಯ ಕೆಲಸಕ್ಕೆ ರಜೆ ಎಂಬುವುದೇ ಇಲ್ಲ ರವಿವಾರ ಅಷ್ಟೇ ಅಲ್ಲ ಯಾವತ್ತೂ ಕೂಡ ಅವಳಿಗೆ ಬಿಡುವಿಲ್ಲದ ಜೀವನ ಅವಳಗಾಗಿದೆ. ಪ್ರತಿನಿತ್ಯ ಪ್ರತಿ ನಿಮಿಷವು ಕೂಡ ತನ್ನ ಕಾಯಕದಲ್ಲಿ ನಿರತಳಾಗಿದ್ದು. ಮನೆಯ ನಿತ್ಯ ಕಾರ್ಯಗಳಲ್ಲದೆ. ಮನೆಯ ಅಲಂಕಾರ. ಕರಕುಶಲತೆ. ಕಾರ್ಯದಲ್ಲಿ ತೊಡಗುತ್ತಾಳೆ.

ಹೆಣ್ಣು ಹುಟ್ಟಿದ ಕೂಡಲೇ ಅಯ್ಯೋ ಹೆಣ್ಣು ಹುಟ್ಟಿತ್ತೆ ಅನ್ನುವರು. ಅವಳು ಹುಟ್ಟಿನಿಂದಲೇ ಮಾನಸಿಕವಾಗಿ ಮತ್ತು ದೈಹಿಕವಾಗಿ ನೋವು. ನಿರಾಸೆ. ಅವಮಾನ .ಅಪನಂಬಿಕೆ.ಕಳಂಕ.ಹೊತ್ತು ಬದುಕುತ್ತಾ ಬಂದವಳು.
ಚಿಕ್ಕವಳಿದ್ದಾಗ ಹೆಣ್ಣು ಮಗು ಗಂಡು ಮಗುವಿನಲ್ಲಿ ತಾರತಮ್ಯ. ಶಾಲೆ ಹೋಗುವಾಗ ಹೆಣ್ಣು ಗಂಡೆಂಬ ಭೇದ ಭಾವ ಗಂಡು ಮಕ್ಕಳ ಜೊತೆ ಮಾತನಾಡಿಸುವ ಹಾಗಿಲ್ಲ ಒಂದು ವೇಳೆ ಮಾತನಾಡಿದರು ಕೂಡ ಆ ತಪ್ಪು ಹೆಣ್ಣಿನ ಮೇಲೆ ಬರುವುದು. ಪುರುಷನಿಗೆ ಇರುವಷ್ಟು ಸ್ವಾತಂತ್ರ್ಯ. ಹೆಣ್ಣಿಗಿಲ್ಲ .ಮಾನಸಿಕವಾಗಿ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲ .ತನ್ನ ಭಾವನೆಯನ್ನು ಹಂಚಿಕೊಳ್ಳುವ ಸ್ವಾತಂತ್ರ್ಯ ಇಲ್ಲ . ತನ್ನ ಜೀವನಕ್ಕೆ ಜೊತೆಗಾರನ ಆರಿಸಿಕೊಳ್ಳುವ ಸ್ವಾತಂತ್ರ್ಯ ಕೂಡ ಅವಳಿಗೆ ಇಲ್ಲ .ಇದು ಅವಳಿಗೆ ಮಾನಸಿಕವಾಗಿ ಹಿಂಸೆಸುತ್ತದೆ.



ಮತ್ತು ದೈಹಿಕವಾಗಿ ಹುಟ್ಟಿ 12 ವರ್ಷಕ್ಕೆ ಋತುಮತಿಯಾಗುವುದು. ಋತುಚಕ್ರದ ಸಮಸ್ಯೆ. ಗರ್ಭಾವಸ್ಥೆಯ ಸಮಸ್ಯೆ .ಪ್ರಸವ ವೇದನೆಯ ಸಮಸ್ಯೆ .ಹೀಗೆ ಹತ್ತು ಹಲವಾರು ದೈಹಿಕ ಸಮಸ್ಯೆಯನ್ನು ಅವಳು ಅನುಭವಿಸುಗಳು.
ಹೆಣ್ಣು ಸಹನೆ. ಶಾಂತಿ,. ತಾಳ್ಮೆ .ನಂಬಿಕೆ .ಪ್ರೀತಿ .ವಿಶ್ವಾಸ.ತುಂಬಿದ ಆಗರ.
ಅವಳು ಯಾವ ಸಾಧಕರಿಗೂ ಕೂಡ ಕಡಿಮೆಯನಲ್ಲ .
ಶಿಖರವೇರಿ ಸಾಧನವನ್ನು ಮಾಡಿದವರು ಮಾತ್ರ ಸಾಧಕರಲ್ಲ .ಒಂದು ಹೆಣ್ಣಾಗಿ ಹುಟ್ಟಿ ತವರು ಮನೆಯಲ್ಲಿ ಮುದ್ದಿನ ಮಗಳಾಗಿ. ಅಕ್ಕರೆಯ ಅಕ್ಕ ತಂಗಿಯಾಗಿ .ಗಂಡನ ಮನೆಯಲ್ಲಿ ನೆಚ್ಚಿನ ಸೊಸೆಯಾಗಿ . ಮಕ್ಕಳಿಗೆ ಮುದ್ದಿನ ತಾಯಿಯಾಗಿ .ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾ ಬರುತ್ತಾಳೆ. ಇದು ಕೂಡ ಒಂದು ಸಾಧನೆಯೇ ಸರಿ.
ಗಂಡನ ಮನೆಯಲ್ಲಿ ಕಷ್ಟವೇ ಇರಲಿ ಸುಖವೇ ಇರಲಿ ನೋವು ನಲಿವು ಏನೇ ಇದ್ದರೂ ಸಹಿಸಿಕೊಂಡು ಇರುವಳು ಹೆಣ್ಣು. ಗಂಡ ಕುಡುಕನಾಗಿದ್ದರು. ಸೋಮಾರಿಯಾಗಿದ್ದರು. ಅನುಸರಿಸಿಕೊಂಡು ಹೋಗುವಳು ಹೆಣ್ಣು.
ಗಂಡನಿಗೆ ಪುರುಷತ್ವವಿಲ್ಲದಿದ್ದರೂ ಕೂಡ ಹೆಂಡತಿಗೆ ಮಕ್ಕಳ ಆಗಿಲ್ಲ ಎನ್ನುವ ಪಟ್ಟ ಕಟ್ಟಿಕೊಂಡವಳು ಹೆಣ್ಣು.
ಬರಿ ಹೆಣ್ಣು ಮಕ್ಕಳನ್ನೇ ಹೆತ್ತಿದ್ದಾಳೆ ಗಂಡು ಮಕ್ಕಳಿಲ್ಲ ಎಂದು ಅತ್ತೆಯರ ಚಿತ್ರ ಹಿಂಸೆಗೆ ಬಲಿಯಾದವಳು ಹೆಣ್ಣು. ಆದರೆ ಹೆಣ್ಣು ಗಂಡು ಮಕ್ಕಳು ಹೆರಲು ಸೊಸೆಯಲ್ಲ ಕಾರಣ .ತನ್ನ ಮಗ ಎನ್ನುವುದು .ಆ ಅತ್ತೆಗೆ ಗೊತ್ತಿಲ್ಲ.
ಹೆಂಡತಿ ಸತ್ತರೆ ವರುಷದಲ್ಲೇ ಮರುಮದುವೆಗೆ ತಯಾರಾಗುವ ಪುರುಷ. ಆದರೆ ಹೆಣ್ಣು ಹಾಗಲ್ಲ ಅವನು ಇರಲಿ ಇಲ್ಲದಿರಲಿ ಜಗತ್ತೇ ಬಿಟ್ಟು ಹೋಗಿರಲಿ ಅವನು ನೆನಪಿನಲ್ಲಿ ಇಡೀ ಜೀವನವನ್ನು ಕಳೆಯುತ್ತಾ. ಮಕ್ಕಳಿಗೆ ನೆರಳಾಗಿ ಕಲ್ಲು ಒರಳು ಸವರಿ ಮಕ್ಕಳಿಗೆ ಹೊಟ್ಟೆ ತುಂಬಿಸಿ ಜೀವನ ಸಾಗಿಸುವಳು ಹೆಣ್ಣು.

ಹೆಣ್ಣಾಗಿ ಹುಟ್ಟುವುದೇ ಒಂದು ಅದ್ಭುತ. ಹೆಣ್ಣು ವಿಶ್ವರೂಪಿಣಿ. ಸದಾ ಅನುಚಾರಿಣಿ. ಪತಿ ಹೃದಯ ಕಮಲ ನಿವಾಸಿನಿ. ಸದ್ಗುಣಿ .ಸಾದ್ವಿಮಣಿ. ಸತಿ ಶಿರೋಮಣಿ . ಸಲಹೆಗಾರಣಿ . ಮಾತೃ ಹೃದಯಣಿ. ಸತಿ ನಾರಿ ಮಣಿ. ರವಿವಾರವೂ ಕೂಡ ರಜೆಯನ್ನು ಕಾಣದ ಈ ಗೃಹಿಣಿ ಗೃಹಿಣಿ…
ನಾನು ಒಂದು ಹೆಣ್ಣಾಗಿ ಎಲ್ಲಾ ಹೆಣ್ಣು ಮಕ್ಕಳಿಗೂ ಹಾಗೂ ಗೃಹಿಣಿಯರಿಗೂ ನನ್ನದೊಂದು ಸಲಾಂ…..

ಶಿವಲೀಲಾ ಎಸ್ ಧನ್ನಾ
ಜವಳಿ (ಡಿ) ಜಿಲ್ಲಾ :-ಕಲ್ಬುರ್ಗಿ
8867589540.


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.