You are currently viewing ಗಜ಼ಲ್

ಗಜ಼ಲ್

ನನ್ನೊಳಗಿನ ಅವನಿಗೂ ಹೇಳಲಾಗದ ನೋವಿದೆ
ಅವನೊಳಗಿನ ನನಗೂ ಬಿಟ್ಟಿರಲಾಗದ ಹಿತವಿದೆ

ಬದುಕು ಒಳಿತು ಕೆಡಕುಗಳ ಗುಲಾಮ ಕಣೆ ಸಾಕಿ
ಅವಳೊಳಗಿನ ಮದಿರೆಗೂ ಸುಖವಿರದ ಗುಂಗಿದೆ

ಒಲವು ಕೊಡಲು ಭಾಗ್ಯವಲ್ಲ ಪಡೆಯಲ್ಯೋಗವೂ
ಅವನೊಳಗಿನ ನಗುವಿಗೂ ಅವಳಿಂದ ಭಯವಿದೆ

ಸರಿಸಿ ನಡೆಯುವುದು ಕಲಿ ಮನುಜ ದುರಾತ್ಮದಾಸೆ
ಚೆಲುವಿನವಳ ಗೆಲುವಿಗೂ ಅವನಿಯಿಂದ ಸಾವಿದೆ

ಸಾವಿನಂಗಡಿಯೊಳಗೆ ಸಾರ್ಥಕವಾಗಿರು ‘ಅಜ಼ಾದ’
ಅಂಗಭೋಗದ ಬೆನ್ನೇರದಿರು ಲಂಪಟತನದ ಸಾಲಿದೆ

ಮೈಬೂಬಸಾಹೇಬ.ವೈ
ಕ.ವಿ.ವಿ‌ ಧಾರವಾಡ









Leave a Reply