ದೇವರನಾಡು ಕಣ್ಮರೆಯಾಗಿದೆ
ಕೇರಳದ ವಯನಾಡು ಗುಡ್ಡ ಭೂಕುಸಿತವಿದು ಸತತ ಜೋರು ಮಳೆಯ ರೌದ್ರ ನರ್ತನವಿದು ಧಾರಾಕಾರ ಸುರಿಮಳೆ ಕೆಸರಿನ ಓಕುಳಿಯದು ಮರಗಳು ಉರುಳಿ ಬಿದ್ದು ಬಟ್ಟ ಬಯಲಾಗಿಹುದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದವರೆಷ್ಟೋ ಮೃತಪಟ್ಟವರೆಷ್ಟೋ ಅನಾಥರಾದವರೆಷ್ಟೋ ಎಲ್ಲೆಲ್ಲೂ ಹೆಣಗಳ ರಾಶಿ ನರಕ ಸದೃಶವಾಗಿದೆ ಸಂಬಂಧಿಕರ ಆಕ್ರಂದನ…