ನಾರಿ ಏನ ಚೆಂದ ನಿನ್ನ ಮಾರಿ
ನೋಡಲಾಕ ಸಾಕಾಗಲ್ಲಎರಡು ಕಪ್ಪು ಕಣ್ಣು
ನಮ್ಮ ಹುಡುಗ
ನೋಡತಾನ ನಿನ್ನ ಹೊರಳಿ-ಹೊರಳಿ
ಸಮಾಧಾನ ಇಲ್ಲ ಎಷ್ಟೋ ಸಾರಿ ನೋಡಿ
ಕುದುರಿ ಹಂಗ ನಿನ್ನ ನಡಗಿ
ನಿಂತು ನೋಡು ನಮ್ಮ ಹುಡುಗನ ಎದೆಗುಂಡಗಿ
ಬೆನ್ನ ಹತ್ಯಾನ ನೀನು ಮಾಡಿದಂಗ ಮೋಡಿ
ದಾರಿ ತಪ್ಪಿ ಎಡವತಾನ ಕಲ್ಲು-ಕಂಟಿ
ಕೇಳಬೇಕಂತಾನ ಚೆಂದದ ನಿನ್ನ ಹೆಸರ
ಸಾಲತಾಯಿಲ್ಲಅವನ ಎದ್ಯಾಗಿನ ಧೈ ರ್ಯ
ಬಡಬಡಸತಾನ ಏನೋ ವಡ ವಡ
ಬಾಯಿ ಒಣಗಿ ಬೇಡ್ಯಾನ ನೀರ
ಹೆಗಲಿಗಿ ಹಾಕಿದಿ ಮಸ್ತಬ್ಯಾ ಗ
ಮಾರಿ ಐತಿ ಕೆಂಪ ಸೂರ್ಯನಂಗ
ಕಯ್ಯಾನ ಬಳಿ ಮಾಡತಾವ ಕಿಂಕಿಣಿ
ಕೇಳಿದರ ಏನ ಚೆಂದ ಶಬುದ ಕಿವಿಗಿ
ಉದ್ದನ ಕೂದಲ ಹರಡಿದಿ ಹಿಂದ ಮುಂದ
ಗಾಳ್ಯಾ ಗ ಹಾರಾಡತಾವ ಏನ ಚೆಂದ
ನೋಡುಗರ ಕಣ್ಣಆಗ್ಯಾ ವ ನೋಡಿ ನೋಡಿ ಮಂದ
ಓಣ್ಯಾಗ ಹುಡುಗರು ಬೆನ್ನ ಹತ್ಯಾರ ನಿನ್ನ ಹಿಂದ ಹಿಂದ
ಏನ ಚೆಂದ ಉಟ್ಟೀದಿ ನಾರಿನೀ ಸೀರಿ
ಅದರ ನಿಲಗಿ ನೋಡಬೇಕು ಗರಿಗರಿ
ಸೀರ್ಯಾಗಿನ ಸುಂದರ ನಾರಿ
ನೀನ ನೋಡು ದೇವಲೋ ಕದ ಅಪ್ಸರಿ
ಪ್ರೊ. ಸಿದ್ದು ಸಾವಳಸಂಗ
ತಾಜಪುರ ಹಿರಿಯ ಕನ್ನಡ ಉಪನ್ಯಾಸಕರು
ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು
ವಿಜಯಪುರ – 586101
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ಕಥೆಗಳು (Stories)
Edeya Hanate
- Original price was: ₹250.00.₹245.00Current price is: ₹245.00.
-
- Sale! Add to basket
- ಸಾಹಿತ್ಯ (Literature)
Heart Lamp
- Original price was: ₹399.00.₹390.00Current price is: ₹390.00.
-
- Out of StockRead more
-