ಗುಬ್ಬಕ್ಕ ಗುಬ್ಬಕ್ಕ
ಗುಬಲಾಕಿ
ಎರಡ್ಮೂರು ಬಾರಿ
ಕಾಳು ಕಡಿ ನುಂಗಾಕಿ
ಚಟ್ ಫಟ್ ನೀರು
ಕೂಡಿದಾಕಿ
ಕ್ಷಣಕ್ಕೊಮ್ಮೆ ಮೈ
ತಿರುವಾಕಿ
ಚೂಟುದ್ದ ದೇಹ
ಲಕ್ ಲಕ್ ಹೂಡಿದಾಕಿ
ಜಗಲಿಮ್ಯಾಲೆ ಮೇಲೆ
ಚಿಂವಚಿಂವ ಕರೆದಾಕಿ
ಮನೆ ಮುಂದೆ
ಸಂಡಿಗೆ ಮುರಿದಾಕಿ
ಮನೆಯೊಡತಿ ಬಂದಾಗ
ಪುರ್ರ್ಂದು ಹಾರಿ ಹೋದಾಕಿ
ಬೇಸಿಗೆಯಲ್ಲಿ ಕಾಳು
ನೀರು ನೋಡುತ್ತಾ ತಿರುಗಾಡಕಿ
ನಿಮ್ಮ ಮನೆಯ ಮಗಳು
ಗುಬ್ಬಕ್ಕ ಗುಬ್ಬಕ್ಕ ಗುಬಲಾಕಿ.
ಡಾ. ತಯಬಅಲಿ. ಅ. ಹೊಂಬಳ
ಮಕ್ಕಳ ಸಾಹಿತಿ, ಪ್ರಾಚಾರ್ಯರು
ಗದಗ
ಮೊ.ನಂ. 9740958082
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.