You are currently viewing ಅಪ್ಪನ ಜೀವನ ಪಾಠ (ಸಣ್ಣ ಕಥೆ)

ಅಪ್ಪನ ಜೀವನ ಪಾಠ (ಸಣ್ಣ ಕಥೆ)

ಒಂದು ಊರಿನಲ್ಲಿ ತಿಮ್ಮ ಎಂಬ ಪುಟ್ಟ ಹುಡುಗನಿದ್ದ. ಅವನು ಚಿಕ್ಕವನಿದ್ದಾಗಲೇ ಆತಾನ ತಾಯಿ ತೀರಿ ಹೋಗಿದ್ದರು. ಅವನ ತಂದೆ ಹನುಮನಿಗೆ ಮಗನನ್ನು ಸಾಕಲು ಕಷ್ಟವಾದರೂ ಆತನಿಗೆ ಏನೂ ತೊಂದರೆ ಆಗದ ಹಾಗೆ ನೋಡಿಕೊಳ್ಳುತ್ತಿದರು. ಇವರು ಒಬ್ಬ ಮಗನನ್ನು ಚನ್ನಾಗಿ ಕಲಿಸಬೇಕೆಂಬ ಆಸೆಯಿಂದ ಪಟ್ಟಣಕ್ಕೆ ಬಂದು ಒಂದು ಖಾಸಗಿ ಶಾಲೆಗೆ ಸೇರಿಸಿದರು.
ಒಮ್ಮೆ ಅವನು ತಂದೆಗೆ ಇದ್ದಕಿದ್ದ ಹಾಗೆ ಹುಷಾರು ತಪ್ಪಿತು. ಅದಕ್ಕಾಗಿ ಆತ ಅಪ್ಪನನ್ನು ನೋಡಿಕೊಳ್ಳಲು ಶಾಲೆಗೆ ಮೂರು ದಿನ ರಜೆ ಹಾಕಿದ. ಅದೇ ಸಮಯದಲ್ಲಿ ಅವನಿಗೆ ಪರೀಕ್ಷೆಗಳು ಹತ್ತಿರದಲ್ಲಿದವು. ಅವನಿಗೆ ಯಾರು ಸಹ ಹಿಂದಿನ ತರಗತಿಯಲ್ಲಿ ನಡೆದ ಪಾಠಗಳ ನೋಟ್ಸ್ ಪುಸ್ತಕ ಕೊಡಲಿಲ್ಲ. ಅವನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ. ಸುಮ್ಮನಿದ್ದ ಇದರಿಂದಾಗಿ ಅವನಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದವು.
ಅವನು ಅದಕ್ಕೆ ಬೇಸರ ಮಾಡಿಕೊಳ್ಳದೆ ಮಾರ್ಕ್ಸ್ ಕಾರ್ಡ್ ನ್ನು. ಅಪ್ಪನಿಗೆ ತೋರಿಸಿದಾಗ ಅಪ್ಪ ಯಾಕಿಷ್ಟು ಕಡಿಮೆ ಅಂಕ ಬಂದಿದೆ. ನೀನು ನೂರಕ್ಕೆ ನೂರು ಅಂಕ ತೆಗೆದುಕೂ ಎಂದು ನಾನು ಹೇಳುವುದಿಲ್ಲ. ಆದರೆ ನೀನು ಶ್ರಮ ಹಾಕಿದಷ್ಟು ಅಂಕ ಬರುತ್ತದೆಯಲ್ಲವೇ? ಎಂದರು. ಅದಕ್ಕೆ ಅವನು ಹೌದಪ್ಪ, ನೀವು ಹೇಳುವುದೇನೋ ಸರಿ, ಆದರೆ ನಿಮಗೆ ಹುಷಾರಿಲ್ಲದ ಸಮಯದಲ್ಲಿ ನಾನು ರಜೆ ಹಾಕಿದ್ದೇನಲ್ಲ ಅಂದು ನಡೆದ ಪಾಠದ ನೋಟ್ಸ್ ಪುಸ್ತಕವನ್ನು ಯಾರು ನನಗೆ ನೀಡಲಿಲ್ಲ ನಾನೇನೂ ಮಾಡಲಿ? ಎಂದ. ಅದಕ್ಕೆ ಅಪ್ಪ ಅವರು ಯಾರು ಪುಸ್ತಕ ಕೊಡಲಿಲ್ಲ ಎಂದು ಹೀಗೆ ನೀನು ನೆಪ ಹೇಳುವ ಬದಲು ಅವರಿಂದ ಹೇಳಿಸಿ ಪಡೆಯಬೇಕಿತ್ತು.ಹೇಳಿಸಿಕೊಳ್ಳಬಹುದಿತ್ತು, ನಾನು ಬಂದು ನಿಮ್ಮ ಶಿಕ್ಷಕರಿಗೆ ಹೇಳುತಿದ್ದೆ. ಎಂದರು. ಅದಕ್ಕೆ ಅವನು ಹೌದಪ್ಪ ನನಗಿದು ಹೊಳೆಯಲೇ ಇಲ್ಲ ಎಂದ. ಅದಕ್ಕೆ ತಂದೆ ಇದು ಕೇವಲ ಓದಿಗೆ ಮಾತ್ರ ಸೀಮಿತವಾಗುದಿಲ್ಲ. ಜೀವನದಲ್ಲೂ ಅಷ್ಟೆ ಯಾರು ಕೋಡ ನೀನು ಮುಂದುವರೆಯಲು ಆಸರೆ &ಸಹಾಯನೀಡುವುದಿಲ್ಲ. ನಾವೇ ಬುದ್ಧಿ ಉಪಯೋಗಿಸಿ ಪರಿಹಾರ ಕಂಡುಕೊಳ್ಳಬೇಕು. ಈ ಮಾತನ್ನು ಯಾವಾಗ್ಲೂ ನೆನಪಿಟ್ಟಿಕೊ ಎಂದು ಅವನು ಅಂದಿನಿಂದ ನೆಪ ಹೇಳಿ ತಪ್ಪಿಸಿಕೊಳ್ಳೋದನ್ನ. ಬಿಟ್ಟು ಜ್ಞಾನ ವಿದ್ಯಾರ್ಥಿಯಾದ.

ರಹಿಮಾನ. ಖಾ. ನದಾಫ್
ವಿದ್ಯಾರ್ಥಿ,
ಸರಕಾರಿ ಪ್ರಥಮ ದರ್ಜೆ ಕಾಲೇಜು, ಇಲಕಲ್
ಬಾಗಲಕೋಟ. ಜಿಲ್ಲೆ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.