You are currently viewing ಹೈಕುಗಳು

ಹೈಕುಗಳು


ನೂರು ದೇವರ
ನೂಕಾಚೆ ದೂರ,ತಾಯಿ
ದೇವಿ ಪೂಜಿಸು.

ಜೀವನದಲ್ಲಿ
ಮರೆಯಬೇಡ ಅನ್ನ
ಕೊಟ್ಟವರನು.

ಬದುಕು ಇಷ್ಟೇ
ಅಲ್ಲ! ಅದು ಸಾಗರ !
ರೌದ್ರ ಗಂಭೀರ.

ನಾಲ್ಕು ಜನರ
ಜೊತೆ ಇರಲು ಬೇಕು
ಮಾತು ಸ್ಪಟಿಕ.

ಅಹಮ್ಮಿಕೆಯ
ಮಾತು,ಎಲುಬಿರದ
ಜಿಹ್ವೆಯೆ ಅಸ್ತ್ರ.

ಕುಲದ ಪ್ರೀತಿ
ಇರಲಿ,ನಾವೊಂದೆಂಬ ;
ಭಾವ ತುಂಬಲಿ.

ವಗರು ಹುಳಿ
ತಿಂದ ದೇಹದಿ ಮೂಲ.
ನೆಲದ ತತ್ವ.


ಹುಡುಗಿಯರ
ಎದೆ ಶೃಂಗಾರ ರಸ.
ಓಕುಳಿಯಾಟ.
———–
ಗಂಗಾಧರ ಅವಟೇರ
ಶ್ರೀ ಮಹೇಶ್ವರ ಪ.ಪೂ.ಕಾಲೇಜು, ಇಟಗಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.