ಏತಕ್ಕೆ ಮನವೆ ಅದೇನು ದುಗುಡ
ಬರುವಳು ಬರುತ್ತಾಳೆ ಇದ್ದು ಬಿಡು ಮೌನ..!!
ಹೇಗಿರುವಳು ಹಾಗೆಯಿರಲಿ
ಎಲ್ಲಿದ್ದವಳು ತಿಳಿದಾಗ ಬರಲಿ
ಯೋಚನೆಯಿಲ್ಲದೆ ವೇದನೆಯಲ್ಲಿರಬೇಡ
ಇದ್ದು ಬಿಡು ಮೌನ..!!
ಕುಗ್ಗದಿರು ಮನವೆ ಕನಸಲ್ಲಾಗಲಿ ಮನಸ್ಸಾಗಲಿ
ಒಂದು ಜಾಗ ಕೊಟ್ಟು ಬಿಡು
ಆಶಯ ಹೊತ್ತು ಘಳಿಗೆಯಲ್ಲಿದ್ದು ಪ್ರತಿ ಸಾರಿ
ಅಲುಬದೆ ಇದ್ದು ಬಿಡು ಮೌನ..!!
ಸಮಯ ಜಾರಿ ಹೋಗಿದೆ ದಿನಗಳು ದೂರಾಗಿವೆ
ಬಯಕೆಗಳು ಡಬಲ್ ಆಗಿವೆ
ಬಯಸಿದ್ದು ಬಳಿಯಿಲ್ಲ
ಚಿಂತನೆ ದೂರಾಗಿಲ್ಲ
ಇನ್ನೂ ಯಾಕೆ ವಿರಹ ಇದ್ದು ಬಿಡು ಮೌನ..!!
ಅಭಾವದೊಳಗೆ ಶುಭವಿಲ್ಲ ನನಗೆ
ಹೋಗದ ಹೆಜ್ಜೆಗಳು ಹಿಂದಿನ ನೆನಪುಗಳು
ಸುತ್ತಾಕಿ ಕೂಗು ಹಾಕುತ್ತಿವೆ
ತಳಮಳದ ಮನಸ್ಸು ಕಣ್ಣೀರು ಹಾಕುತ್ತಿದೆ
ನೋವಲ್ಲಿ ಇದ್ದು ಬಿಡು ಮೌನ…!!
ಅವಳಿಲ್ಲದ ಬಯಲು ಖಾಲಿಯಾಗಿರುವ ವಿಚಾರದ ಕೋಶ
ನಿಮಿಷಕ್ಕೊಮ್ಮೆ ವಿಷಾದ ಹೇಗೆ ಸಹಿಸಲಿ
ಬರೆದು ಕೊಡುವ ಭಾವನೆಯಿಲ್ಲ
ಕಳಿಸುವ ವಿಳಾಸ ಗೊತ್ತಿಲ್ಲ ಇದ್ದು ಬಿಡು ಮೌನ…!!
ಕೊನೆಯಾಟದಲ್ಲಿ ಸಮಾಪ್ತಿಯಿದೆ
ಉಳಿದರೆ ಬೆಳಗುವ ದೀಪ್ತಿಯಿದೆ
ವ್ಯಾಪ್ತಿಯಲ್ಲಿರದವಳು ಪ್ರಾಪ್ತಿಯಾಗುವಳೆ..?
ಸರ್ವಸ್ವವನ್ನೂ ಮರೆತಿರುವನು ಇದ್ದು ಬಿಡು ಮೌನ…!!
ಶ್ರೀಕಾಂತಯ್ಯ ಮಠ
ಲಿಂಗಸೂಗುರು ರಾಯಚೂರು ಜಿಲ್ಲೆ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.