You are currently viewing ಕನ್ನಡದ ಗುಡಿ ಸವಿಜೇನ ನುಡಿ

ಕನ್ನಡದ ಗುಡಿ ಸವಿಜೇನ ನುಡಿ

ಕನ್ನಡ ನಮ್ಮ ಕರ್ನಾಟಕ ರಾಜ್ಯದ ಭಾಷೆಯಿದು
ಕನ್ನಡದ ಗುಡಿಯಿದು ಸವಿಜೇನ ನುಡಿವ ಕನ್ನಡವಿದು
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಹೆಗ್ಗೆಳಿಕೆಯಿದು
ಭಾರತದ ಪುರಾತನವಾದ ಶಾಸ್ತ್ರೀಯ ಭಾಷೆಯಿದು

ಬ್ರಾಹ್ಮಿಲಿಪಿಯಿಂದ ರೂಪುಗೊಂಡ ಕನ್ನಡ ಭಾಷೆಯು
ಎಂಟು ಜ್ಞಾನಪೀಠ ಪ್ರಶಸ್ತಿಯ ಪಡೆದಂತ ಹೆಮ್ಮೆಯು
ಕನ್ನಡ ಲಿಪಿಯು ಲಿಪಿಗಳ ರಾಣಿಯೆಂದು ಹೆಸರಾದುದು
ರಾಜರ ಆಳ್ವಿಕೆಯ ಕಾಲದಲ್ಲಿ ಆಸ್ಥಾನದ ಭಾಷೆಯಿದು

ನಮ್ಮ ಕಸ್ತೂರಿ ಕನ್ನಡ ಕನ್ನಡಿಗರ ಮಾತೃಭಾಷೆಯಿದು
ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡವಿದು
ನಮ್ಮ ಕನ್ನಡ ಭಾಷೆಯು ಬೆಳೆದು ಬಂದ ಹಾದಿಯಿದು
ಹಳೆಗನ್ನಡ ನಡುಗನ್ನಡ ಹೊಸಗನ್ನಡ ಸಿರಿಗನ್ನಡವಿದು

ಉಸಿರಾಗಲಿ ಕನ್ನಡದ ಹೆಸರೆಂದು ಅಳಿಯದಿರಲೆನ್ನುವ
ಕನ್ನಡಿಗರು ನಾವೆಲ್ಲ ಕನ್ನಡಾಂಬೆಯ ಮಕ್ಕಳೆನ್ನುವ
ಜೈ ಕರ್ನಾಟಕ ನಮೋ ಕನ್ನಡ ಸಾಹಿತ್ಯ ಎನ್ನುವ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಜೈಕಾರ ಹಾಕುವ

🙏ಧನ್ಯವಾದ
✍️ಪೂರ್ಣಿಮಾ ರಾಜೇಶ್
ಕಾವ್ಯ ನಾಮ- ಬಸು ಮಲ್ಕಿ
ಹವ್ಯಾಸಿ ಬರಹಗಾರ್ತಿ, ಕವಯಿತ್ರಿ ಬೆಂಗಳೂರು









Leave a Reply