You are currently viewing ಅಮ್ಮನ ಪ್ರೀತಿ ನಿಷ್ಕಲ್ಮಶವು

ಅಮ್ಮನ ಪ್ರೀತಿ ನಿಷ್ಕಲ್ಮಶವು

ನವಮಾಸಗಳು ನನ್ನನು ತನ್ನೊಡಲಲಿ ಹೊತ್ತವಳು
ನನ್ನ ಹೆತ್ತು ಹೊತ್ತವಳಿಗೆ ಕೋಟಿ ನಮನಗಳು
ಜೀವಕ್ಕೆ ಜೀವ ಕೊಟ್ಟು ಜೀವವ ಉಳಿಸುವಳು
ಹಸುಕಂದನ ನಗುಮೊಗವ ಕಂಡು ಹರ್ಷಿಸುವಳು

ತನ್ನೆಲ್ಲ ನೋವು ಸಂಕಟವ ಮರೆತು ನಗುವಳು
ಸಹನೆ , ಕರುಣೆ ಮತ್ತು ತಾಳ್ಮೆಗೆ ಹೆಸರಾದವಳು
ಅವ್ವ ಮಾತೆ ಜನನಿ ಅಮ್ಮ ದೇವತೆಯಂತವಳು
ಕೋಟಿ ರೂಪಾಯಿಗಳ ಕೊಟ್ಟರೂ ಸಿಗದವಳು

ಅಮ್ಮ ನಿಮ್ಮಯ ಋಣವ ತೀರಿಸಲು ಅಸಾಧ್ಯವು
ಅಮ್ಮನೆಂದು ಕರೆಯುವುದೇ ಎನಗೆ ಆನಂದವು
ಅಮ್ಮ ನಿಮ್ಮ ನಿಷ್ಕಲ್ಮಶ ಪ್ರೀತಿಗೆ ಶರಣಾಗುವೆವು
ಅಮ್ಮನ ಅಕ್ಕರೆಯ ನುಡಿ ವಾತ್ಸಲ್ಯಕೆ ಕರಗುವೆವು

ಅಮ್ಮನ ಮಡಿಲಲಿ ಸ್ವರ್ಗ ಸುಖವ ಕಾಣುವೆವು
ನಮ್ಮಮ್ಮ ನಮ್ಮ ಕಣ್ಣಿಗೆ ಕಾಣುವ ದೇವರೆನ್ನುವೆವು
ಹಡೆದವ್ವ ಜನ್ಮದಾತೆಗೆ ಶಿರಬಾಗಿ ನಮಿಸುವೆವು
ಕವನದ ಮೂಲಕ ಅಮ್ಮನಿಗೆ ಕಾವ್ಯ ನಮನ ಸಲ್ಲಿಸುವೆವು

ಧನ್ಯವಾದ

ಪೂರ್ಣಿಮಾ ರಾಜೇಶ್
ಬೆಂಗಳೂರು