You are currently viewing ನನ್ನವ್ವ

ನನ್ನವ್ವ

ಸೂರ್ಯನಿಗಿಂತ ಮೊದಲೇ ಎದ್ದೇಳುವಳು
ಚಂದಿರ ಬಂದರೂ ಮಲಗದವಳು
ರಂಗೋಲಿ ಹಾಕುತ್ತಾ ಸುಪ್ರಭಾತ ಹಾಡುತ್ತಾ ಎಬ್ಬಿಸುವಳು
ನಾ ಎದ್ದಾಗ ನಗು ನಗುತ್ತ ನನ್ನಪ್ಪ ಎಂದವಳು ನನ್ನವ್ವ

ರುಚಿ ಶುಚಿ ಮಾಡಿ ಹಾಕಿದವಳು
ತನಗೆ ಉಳಿಯದಿದ್ದಾಗ ಹಸಿವಿಲ್ಲ ಎಂದವಳು
ಹಣೆಯಲ್ಲಿ ಸೂರ್ಯನಂತೆ ಕುಂಕುಮ ದರಿಸಿದವಳು
ಕೆನ್ನೆಗೆ ಅರಿಶಿನ ಹಚ್ಚಿದವಳು ನನ್ನವ್ವ

ಸ್ವಲ್ಪ ಗಾಯವಾದಾಗ ವೈದ್ಯಳಾದಳು
ಅಂಜಿದಾಗ ದೇವತೆಯಾದಳು
ಕುಟುಂಬದ ಭವಿಷ್ಯಕ್ಕೆ ಇಂಜಿನಿಯರ್ ಆದಳು
ತನಗೆಂದು ಏನು ಮಾಡಿಕೊಳ್ಳದವಳು ನನ್ನವ್ವ

ನಗುಮುಖದವಳು
ಜೀವನದ ಸ್ಪೂರ್ತಿಯವಳು
ಎಲ್ಲದಕ್ಕೂ ಮೂಲ ಪ್ರಯತ್ನ ಎಂದವಳು
ದೇವರಿದ್ದಾನೆ ಮುನ್ನಡಿ ಎಂದವಳು ನನ್ನವ್ವ

ಎಷ್ಟೋ ದೇವರಿಗೆ ಉಪವಾಸ ಮಾಡಿದವಳು
ಎಷ್ಟೋ ಕಷ್ಟ ಪಟ್ಟವಳು
ಆದರೂ ನಾನು ಚೆನ್ನಾಗಿದ್ದೇನೆ
ನನಗೇನಾಗಿದೆ ಅಂದವಳು ನನ್ನವ್ವ

ವಿಶ್ವನಾಥ ಗು ಕುಲಕರ್ಣಿ