You are currently viewing ಪ್ರೀತಿಯ ಬಿರುಗಾಳಿಯಲ್ಲಿ ಸಿಲುಕಿದ ಹೂ

ಪ್ರೀತಿಯ ಬಿರುಗಾಳಿಯಲ್ಲಿ ಸಿಲುಕಿದ ಹೂ

ತಪ್ಪಾಗಿದ್ದು ನಂದೇ
ನೀ ನನಗಾಗಿ ಸೀಮಿತವಾಗಿದೆ ಎಂದು ಹಿಗ್ಗಿದ್ದು

ನಿನ್ನದು ತಪ್ಪೇನಿದೆ, ಬಿಡು
ನಟನೆಗೆ ಮನ ಸೋತಿದ್ದು ನನ್ನದೇ ತಪ್ಪು

ನೀ ಚಿನ್ನವೆಂದೆ
ನಾನು ಆಚಾರ್ಯ ಬಳಿ ಪರೀಕ್ಷಿಸಬೇಕಿತ್ತು

ನಿನ್ನ ಪದಗಳ ಮೋಡಿಗೆ ಸೋತೆ
ಕವಿಯಾಗಿ ಒಮ್ಮೆ ನೋಡಬೇಕಿತ್ತು

ನೀನೇ ಮಾಡಿದ ಮೋಡಿಯ ಬಲೆಗೆ ಸಿಲುಕಿದ ಸಖಿ ನಾನು
ನೀನೇ ತೋರಿದ ಪ್ರೀತಿಗೆ ದೂರದಲ್ಲಿ ಸಿಲುಕಿದ ಸಖಿ ನಾನು

ಪ್ರೀತಿಯ ಶೆಕೆಯಲ್ಲಿ ಸಿಲುಕಿ
ಬಾಡಿದ ಹೂ ನಾನು

ಸ್ಪೂರ್ತಿ ಎಸ್ ಆರ್
ಹೊಳೆನರಸೀಪುರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ