ಮಗುವಿನ ಮನಸಿದು ಹೂವಿನಷ್ಟೆ ಕೋಮಲ ಮೃದು
ಮುಗ್ಧ ಮುದ್ದು ನಗುವು ಚಂದ ಬಲು ಮೋಹಕವದು
ಮಗುವಿನ ಮೊದಲ ತೊದಲು ನುಡಿಯು ಚಂದವದು
ಮಗುವ ನಗುಮೊಗವ ಕಂಡು ಆನಂದವಾಗುವುದು
ಹೆತ್ತವರ ಕಂಡ ಬಹುದಿನದ ಕನಸಿಂದು ಈಡೇರಿತು
ದೈವ ತಂದ ವರವಿದು ಕಂದನ ಆಗಮನವಾಯಿತು
ದೇವರು ಕರುಣಿಸಿದ ವರದಿಂದ ಬಾಳು ಹಸನಾಯಿತು
ಅಮ್ಮನ ಮಡಿಲಲಿ ಅಕ್ಕರೆಯ ಪಾಠವ ಕಲಿಯಿತು
ಮಗುವಿಗಿಲ್ಲ ಇಂದು ನಾಳೆಗಳ ಗೊಡವೆ ಚಿಂತೆಯು
ಮಗುವಿನ ಮನವು ಪ್ರಜ್ವಲಿಸುವ ಬೆಳಕಿನಂತೆಯು
ಬೆಳೆವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆಯು
ಮಗುವನ್ನು ಮುದ್ದಿಸಿ ಲಾಲಿಸಿ ಪಾಲಿಸುವಂತೆಯು
ನೀನೆಂದೆಂದು ನಗು ನಗುತಿರು ಕಿಲಕಿಲನೆ ಕಂದ
ಕರುನಾಡಿನ ಸಿರಿಯಾಗಿ ಬಾ ಕನ್ನಡದ ಕಂದ
ಕರುನಾಡಿನ ಹೆಮ್ಮೆಯ ವೀರ ಕನ್ನಡಿಗ ನೀನಾಗು
ಭುವನೇಶ್ವರಿ ದೇವಿಗೆ ಕರವ ಜೋಡಿಸಿ ಶಿರಬಾಗು
ಪೂರ್ಣಿಮಾ ರಾಜೇಶ್
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ