You are currently viewing ವರುಣಾರ್ಭಟ

ವರುಣಾರ್ಭಟ

ಉದ್ಯಾನನಗರಿ ನಮ್ಮ ಬೆಂಗಳೂರು ಐಟಿ -ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಮಹಾನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜನರ ನೆಮ್ಮದಿ ನಿದ್ದೆಯ ಕಸಿದಿರುವ ಮಳೆಯ ರೌದ್ರ ನರ್ತನ ಕೆಸರಿನ ಓಕುಳಿಯಾಟ ಎಲ್ಲೆಡೆಗಳಿಂದ ಹರಿದುಬಂದ ನೀರು ಕೆರೆಯಂತಾದ ರಸ್ತೆಗಳು ತಗ್ಗು ಪ್ರದೇಶದ ಸುತ್ತಮುತ್ತ ಮಳೆ ನೀರು ಸಂಗ್ರಹವಾಗಿ ಪ್ರವಾಹ ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ. ನೀರು ಹರಿಯಲು ಜಾಗವಿಲ್ಲ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಸುರಿದ ಮಳೆಯಿಂದ ಕೆರೆಗಳು ಕೋಡಿ ಬಿದ್ದ ಪರಿಣಾಮ ಕೆಲವು ಕಡೆ ರಾಜಾಕಾಲುವೆಗಳು ತುಂಬಿ ಉಕ್ಕಿ ಹರಿದು ಬೆಂಗಳೂರಿನ ಅನೇಕ ಲೇಔಟ್ ಗಳು. ಹಾಗೂ ಕೆರೆಪಕ್ಕದಲ್ಲಿರುವ ಅಪಾರ್ಟ್‌ಮೆಂಟಿನ ಒಳಗೆ ನೀರು ನುಗ್ಗಿ ಕೆರೆಯಂತಾಗಿದೆ. ಜನರು ಮನೆಯಿಂದ ಹೊರ ಬರಲಾರದೆ ನಿವಾಸಿಗಳು.

“ಅಯ್ಯೋ ನಮ್ಮ ಮನೆಗೆ ಮಳೆನೀರು ನುಗ್ಗಿದೆ “ಬೆಲೆಬಾಳುವ ಪೀಠೋಪಕರಣ, ದುಬಾರಿ ಬೆಲೆಯ ಕಾರುಗಳು, ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿ ಹಾಳಾಗಿದೆ. ಎಂದು ರೋದಿಸುತ್ತಿದ್ದಾರೆ. ನೀರಿನ ಪ್ರಮಾಣ ಇಳಿಮುಖವಾಗುವವರೆಗೂ ತಮ್ಮ. ಸ್ನೇಹಿತರ ಸಂಬಂಧಿಕರ ಮನೆಗಳಿಗೆ ತೆರಳಲು ಆಶ್ರಯ ಪಡೆಯಬೇಕಾದ ಸಂಕಷ್ಟ ಪರಿಸ್ಥಿತಿಯ ಎದುರಿಸುತ್ತಿರುವರು ಮಕ್ಕಳು ಶಾಲೆಗೆ ಹೋಗಲಾಗುತ್ತಿಲ್ಲ ,ಮನೆಯಿಂದ ಹೊರಗೆ ಕೆಲಸಕ್ಕೆ ಹೋಗಿ ದುಡಿಯುವವರು ಮತ್ತೆ ಮನೆಗೆ ಬರಲಾಗುತ್ತಿಲ್ಲ.

ವಯೋವೃದ್ಧರು,ನಾನಾ ಖಾಯಿಲೆಯಿಂದ ಬಳಲುತ್ತಿರುವರು, ಪುಟ್ಟ ಕಂದಮ್ಮಗಳು ಜನರು ರೋಧಿಸುವ ದೃಶ್ಯ ಹೃದಯ ಕಲಕುವಂತಿದೆ. ಹಲವೆಡೆ ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡಗಳು ಏಕಾಏಕೀ ಕುಸಿದು.ನೆಲಕ್ಕುರಳಿದೆ. ಹಲವಾರು ಕಾರ್ಮಿಕರು ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕು ಸಾವು -ನೋವು ನರಳಾಟದ ಘನಘೋರ ದುರಂತ ದೃಶ್ಯಗಳು ಜನರ ಮನಕಲಕುವಂತಿದೆ.” ಲಕ್ಷಾಂತರ ರೂಪಾಯಿ ಮೌಲ್ಯದ” ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಚಂಡಿ ಹಿಡಿದಂತೆ ಸುರಿಯುತ್ತಿರುವ ಮಳೆಯ ಅನಾಹುತ ಎಲ್ಲೆಲ್ಲೂ ನೀರು ಜಲಪಾತ ಸೃಷ್ಟಿಯಾಗಿದೆ.

“ಇನ್ನೆಷ್ಟು ದಿನ ಕಾಯಬೇಕು ಈ ಮಳೆಯ ರೌದ್ರ ನರ್ತನ ಕಡಿಮೆಯಾಗಿ ಬೆಂಗಳೂರು ಮಹಾನಗರದ ಜನ ಜೀವನ ಆತಂಕದ ವಾತಾವರಣ ಸಹಜ ಸ್ಥಿತಿಗೆ ಮರಳಲು ವರುಣನ ಮುನಿಸು ಆರ್ಭಟ ಕಡಿಮೆಯಾಗಬೇಕು. ನಮ್ಮ ಸುತ್ತ ಮುತ್ತ ವಾಸಿಸುವ ಸಂಕಷ್ಟ ಪರಿಸ್ಥಿತಿಯ ಎದುರಿಸುತ್ತಿರುವ ಜನರಿಗೆ ಸಹಾಯ ಹಸ್ತಚಾಚೋಣ ನಮ್ಮ ಕೈಲಾದ ಸಹಾಯ ಮಾಡೋಣ ,ವರುಣದೇವ ಎಮಗೆ ಕೃಪೆಯ ತೋರು ಎಂದು ಮೊರೆಯಿಡಬೇಕು

ಆ ಭಗವಂತನ ಕೃಪೆಯಿಂದ ಜಲಸಂಕಷ್ಟಗಳು ನಿವಾರಣೆಯಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುವೆ

ಪೂರ್ಣಿಮಾ ರಾಜೇಶ್
ಹವ್ಯಾಸಿ.ಬರಹಗಾರ್ತಿ ಕವಯಿತ್ರಿ
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ