You are currently viewing ಶಿಕ್ಷಣ ಅಂದು ಇಂದು

ಶಿಕ್ಷಣ ಅಂದು ಇಂದು

ನಮ್ಮ ಭಾರತದಲ್ಲಿ ಹಿಂದೆ ಗುರುಕುಲ ಪದ್ದತಿ ಜಾರಿಯಲಿ ಇದೆ. ಈಗ ಆಧುನಿಕ ಶಿಕ್ಷಣ ಇದೆ. ಹಿಂದೆ ಗುರುಕುಲದಲ್ಲಿವಿಧೇಯಕನಾಗಿ ಇರುತಿದ್ದ ವಿದ್ಯಾರ್ಥಿಗಳು. ಗುರಿವಿನ ಆಜ್ಞೆ ಮಾತು ಶಿರ್ಸ ವಹಿಸಿ ಪಾಲಿಸುತಿದ್ದ. ಅಂದು ಗುರು ದಕ್ಷಿಣೆ ಕಾಣಿಕೆ ನೀಡುತಿದ್ದರು, ತೀರಾ ಬಡ ವಿದ್ಯಾರ್ಥಿಗಳಿಗೆ ಮಾಫಿ ಇದೆ ಅವರು ಗುರುವಿನ ಸೇವೆ ನಿರ್ಮಲ ನಿಷ್ಕಲ್ಮಶವಾಗಿ ಮಾಡುವರು. ತಮ್ಮ ಅವಧಿ ಮುಗಿದ ನಂತರ ಬೇರೆಡೆ ಉನ್ನತ ವಿದ್ಯಾ ಭ್ಯಾಸ ಅತ್ವ ವೃತ್ತಿ ಕೈಗೊಳ್ಳುವರು. ಆದ್ರೇ ಇಂದು ಶಿಕ್ಷಣ ಸಾಮಾನ್ಯ ಜನರ ಪಾಲಿಗೆಏಟುಕದ ಗಗಕುಸುಮ ಆಗಿದೆ. ಶಾಲೆಹಾಗೂ ಕಾಲೇಜುಗಳು ಹಣ ಕೀಳುವ ಸಂಸ್ಥೆ ಆಗಿವೆ. ಕೇವಲ ರಾಂಕಿಂಗ್, ಮಾರ್ಕ್ಸ್ ಅತೀ ಪ್ರಾಮುಖ್ಯತೆಇಂದು ಬಂದಿದೆ. ಎಲ್ಲರು ೯೦ಹೆಚ್ಚು ಅಂಕ ಗಳಿಕೆ ಬಹಳ ಕಾಮನ್ ಆಗಿದೆ. ಸ್ಪರ್ಧೆ ಯುಗದಲ್ಲಿ ಸ್ಪರ್ಧಾ ಪರೀಕ್ಷೆ tests ಬೆಲೆ ಹೆಚ್ಚಿದೆ. ನಿಜವಾದ ಶಿಕ್ಷಣ ದೊರೆಯುತ್ತಿಲ್ಲ ಇದುಬಹಳಬೇಸರ ಖೇದಕರ ಸಂಗತಿ ಆಗಿದೆ. ವಿದ್ಯಾರ್ಥಿಗಳಿಗೆಮಕ್ಕಳಿಗೆ ಸರ್ವೋತ್ತಮ ಬೆಳವಣಿಗೆ ಆಗುವ ಉತ್ತಮ ಶಿಕ್ಷಣ ಸಿಗುತಿಲ್ಲ. ನೀತಿರೀತಿ ಪಾಠಗಳು. ಜೀವನ ಕೌಶಲ್ಯ ಗಳು ಸಹಬಾಳ್ವೆ, ಗುರು ಹಿರಿಯರಿಗೆ ಗೌರವ ಅದರ ಮಾಯಾ ಆಗಿದೆ ಸಂಪೂರ್ಣ ಅಂದ್ರೆ ತಪ್ಪಿಲ್ಲ ಅಲ್ಲಿ ಇಲ್ಲಿ ಅಪವಾದ ಇದೆ. ಸ್ನೇಹಪರತೆ ಪ್ರೀತಿ ವಿಶ್ವಾಸ ಇಲ್ಲ. ಮೇಲು ಕೀಳು, ವರ್ಗ ವರ್ಣ ಜಾತಿ ಧರ್ಮ ಭೇದಗಳು, ಗುಂಪುಗಳುರಾಜಕೀಯ ಗುಂಪುಗಾರಿಕೆ ದ್ವೇಷ ಅಸೂಯೆ ಗಲಾಟೆ ಹೆಚ್ಚಿವೆ ಕ್ಯಾಂಪಸ್ ನಲ್ಲಿ. ಅನೇಕ ಸರಿ ಗಲಾಟೆ ಕೊಲೆ ಆಗಿವೆ. ಆತ್ಮಹತ್ಯೆ ಪ್ರಕರಣ ಹೆಚ್ಚುತಿವೆ. ಕಮ್ಮಿ ಮಾರ್ಕ್ಸ್ ಫೇಲ್ ಉದ್ಯೋಗ ಖಿನ್ನತೆ ತಂದೆ ತಾಯಿ ಒತ್ತಡ ಸಮಾಜದ ಪ್ರೆಷರ್ ಪೀರ್ ಪ್ರೆಷರ್ ಮಕ್ಕಳನ್ನು ದುರಂತ ಅಂಚಿಗೆ ತಲ್ಲಿರುವುದು ಅರೋಗ್ಯ ಕರ ಬೆಳವಣಿಗೆ ಖಂಡಿತ ಅಲ್ಲ. ನಮ್ಮ ದೇಶದ ಭವ್ಯ ಸಂಸ್ಕೃತಿ ಪರಂಪರೆ, ನಾಡು ನುಡಿಗಳು ಬಗ್ಗೆ ಹೆಮ್ಮೆ ಇರಬೇಕು ಉನ್ನತ ಮೌಲ್ಯತತ್ವಗಳು ಸಿದ್ದಾ ೦ತಆದರ್ಶಗಳು ಇರಬೇಕು.



ಆದರ್ಶ ವ್ಯಕ್ತಿ ಪರಿಚಯ ಇರಲಿ. ಶ್ರಮ ದಾನ, ಹಳ್ಳಿ ಜೀವನ ಪರಿಚಯ ಇದ್ದರೆ ಚೆನಾಗಿರುತ್ತದೆ. ಕೃಷಿ ಇತರ ಕೆಲಸ ಬಗ್ಗೆ ಪರಿಚಯ ಗೌರವ ಹಾಗೂ ತರಬೇತಿ ತರಗತಿ ಗಳು ಶಾಲಾ ಕಾಲೇಜು ಗಲ್ಲಿ ಇರಲಿ. ಇಷ್ಟೇ ಅಲ್ಲದೆ ಕಲೆ ಸಂಗೀತ ಸಾಹಿತ್ಯ ನೃತ್ಯ ನಾಟಕ ಕಾವ್ಯ ಜಾನಪದ ಕಲೆಗಳು ಸಂಸ್ಕೃತಿ ಬಗ್ಗೆ ತರಗತಿ ಇರಲಿ. ಮಕ್ಕಳಿಗೆ ಯಾವ್ದು ಬೇಕು ಅದೇ ಆಯ್ಕೆ ಇರಲಿ. ಬೇರೆ ಬೇರೆ ಭಾಷೆ ಸಂಸ್ಕೃತಿ ಪರಿಚಯ ಆಗ್ಬೇಕು ಅದು ಭಾರತೀಯ ಹಾಗೂ ವಿದೇಶಿ ಭಾಷೆ ಸಂಸ್ಕೃತಿ ಆಗಿರಬಹುದು ಇದು ಕಡ್ಡಾಯವಾಗಿ ಇದ್ದರೆ ಬೌದಿಕ ಮಟ್ಟ ಹಾಗೂ ಜ್ಞಾನೋಧಯ ಆಗುತ್ತೆ ಸಂಕುಚಿತ ಮನಸು ಮನೋ ಭಾವನೆ ಹೋಗುತ್ತೆ. ನೈತಿಕತೆ ಶಿಕ್ಷಣ ಇರಲಿ ಮಾನವೀಯತೆ, ದಯೆ ದಾನ ಧರ್ಮ ಅಂಶಗಳು ಇರಬೇಕು. ಸಹಾಯ ಗುಣ ಕರುಣೆ ತಾಳ್ಮೆ ಪ್ರೀತಿ ವಿಶ್ವಾಸ ವೃದ್ಧಿ ಆಗಬೇಕು. ಆಯುರ್ವೇದ ಯೋಗ ಧ್ಯಾನಗಳು syllabus ನಲ್ಲಿ compulsory ಇದ್ರೆ ಸೂಕ್ತ. ಕಂಪ್ಯೂಟರ್, ಸಾಮಾಜಿಕ ಪಾಠ ಪೊಲಿಟಿಕಲ್ ಸೈನ್ಸ್ ಇದ್ದರು ಸೂಕ್ತ. ಇಷ್ಟೇ ಅಲ್ಲದೆ ಭೂಮಿ ಪರಿಸರ ವಾತಾವರಣ ಸಂಬಂಧ ಹೆಚ್ಚು ತರಬೇತಿ ತರಗತಿ ಇರಲಿ ಕಡ್ಡಾಯವಾಗಿ ಆಗ ಪರಿಸರದ ಕಾಳಜಿ ಪ್ರೀತಿ ಬರಬಹುದು. ಪ್ಲಾಸ್ಟಿಕ್ ಅನಾಹುತ ತಿಳಿಯಬೇಕು ಇತರರಿಗೆ ತಿಲಸಬೇಕು. ಒಟ್ಟನಲ್ಲಿ ಶಿಕ್ಷಣದಿಂದ ಸರ್ವೋತ್ತಮ ಅಭಿವೃದ್ಧಿ,ವ್ಯಕ್ತಿತ್ವ ವಿಕಾಸನ್ ಆಗಬೇಕು ಆಗ ದೇಶ ಪ್ರಗತಿ ಕುಟುಂಬ ನೆಮ್ಮದಿ ಸಾಮಾಜಿಕ ಶಾಂತಿ ನೆಲಸುತ್ತದೆ. ಶಿಕ್ಷಣೆ ಶಿಕ್ಷೆ ಆಗಿದೆ ಪೋಷಕರಿಗೆ ಹೊರೆ ಆಗಿದೆ lkg ukg ೧ಎಸ್ಟಿಡಿಗೆ ಸಾವಿರಾರು ರೂಪಾಯಿ ಡೊನೇಷನ್ ಕೊಡಬೇಕು. ಪೋಷಕರು ಕಾನ್ವೆಂಟ್ ಹುಚ್ಚು ಆಂಗ್ಲ ಶಾಲೆ ಹುಚ್ಚು ಹೆಚ್ಚಿದೆ. ಪ್ರತಿಷ್ಠೆ ಸ್ಟೇಟಸ್ ಸ್ವಪ್ರತಿಷ್ಠೆ ಇಂದ ಪೋಷಕರು ಸುಮ್ನೆ sub ಸ್ಟ್ಯಾಂಡರ್ಡ್ ಶಾಲೆಗಳಿಗೆ ವಿಪ್ರೀತ ಹಣ ಖರ್ಚು ಮಾಡುವರು. ಕಾಲೇಜು ಫೀಸ್ ಗಿಂತ ಶಾಲೆ feesvan ಫಿಸ್ ಡೊನೇಷನ್ಗಹೆಚ್ಚಿದೆ ತಂದೆ ತಾಯಿ ಕಷ್ಟ ಪಟ್ಟು ಓದಿಸುವರು ಮನೆ ಮಟ್ಟ ಜಮೀನು ಆಸ್ತಿ ಮಾರಿ ಮೆಡಿಕಲ್ courses ಇಂಜಿನಿಯರ್ ಇತರೆ ಮಾಡಿಸುವರು. ಇದ್ರಲ್ಲಿ ಓದಿದ ವಿದ್ಯಾರ್ಥಿಗಳಿಗೆ ಬರೀ ಹಣದ ಚಿಂತೆ ಸರಿಯಾಗಿ ಕೆಲಸ ಮಾಡೋಲ್ಲ. ಅವರು ಭ್ರಷ್ಟಾಚಾರ ಲಂಚ ಕೈ ಒದ್ದೆಆಗು ವರು. ನೀತಿ ರೀತಿ ನೈತಿಕತೆ ಮಾಯಾ. ಉತ್ತಮ ಇಂಜಿನಿಯರ್ ಡಾಕ್ಟರ್ ಆಗಲು ಹೀಗೆ ಸಾಧ್ಯ ನೀವೇ ಹೇಳಿ., ಮನಸಲ್ಲಿ ಬರಿಹಣದ ದಾಹ ವಿಪ್ರೀತ ಹಣಆಸ್ತಿವಡವೆ ಸಂಪಾದನೆಮೇಲೆ ಇರುತ್ತದೆ. ಸರಿಯಾಗಿ ಚಿಕೆತ್ಸೆ ಕೊಡಲು ಅತ್ವ ಕಾಮಗಾರಿ ಮೇಲೆ ಅಲ್ಲ. ಕಟ್ಟಡ ಕುಸಿತ ರೋಡ್ ಗುಂಡಿ ಇತರೆ ನಿತ್ಯ ನರಕ ಸದೃಶ್ಯ ನೋಡ್ತಿವಿ. ವೈದರು ತಪ್ಪು ಇಂಜೆಕ್ಷನ್ ಟ್ರೀಟ್ಮೆಂಟ್ ಕೊಡೋದು ನೋಡಿದೀವಿ . ಗುಣಮಟ್ಟದ ನೈತಿಕತೆ ಶಿಕ್ಷಣ ಇಂದು ಬಹು ಅಗತ್ಯ.

ಪ್ರೀತಿ ಭರತ್ ಜವಳಿ
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.