ಕಳೆದ ದಿನಗಳನ್ನು ನೆನೆಯದೆ ಕಂಡ ಹಾದಿಯ ಮರೆಯದೆ ಛಲವನ್ನು ಬಿಡದೆ ಸಾಗುತ್ತ ಕಷ್ಟಗಳನ್ನು ದಾಟಿ ನುಗ್ಗುತ್ತ ಇರುಳಲಿ ಕಂಡ ಕನಸಿನೆಡೆಗೆ ಹಗಲಲಿ ಅದರ ನನಸಿನೆಡೆಗೆ ಕಲ್ಲು ಮುಳ್ಳುಗಳ ತುಳಿಯುತ ಮೈಲಿಗಲ್ಲುಗಳ ಮುಟ್ಟುತ ಬಂದವರೆಲ್ಲರೂ ಬಾಳಿನಿಡಿ ಇರುವುದಿಲ್ಲ ಎಂಬ ಅರಿವಿನಲಿ ಬಂದವರ ಮಾತಿಗೊಳಗಾಗದೆ ಆ ಸ್ನೇಹದಲಿ ಮಗ್ಧನಾಗದೇ ಬರುವಾಗಲೂ ಇರುವಾಗಲೂ ಹೋಗುವಾಗಲೂ ಏಕಾಂಗಿಯೇ ಈ ದೈತ್ಯ ನಿಜವನ್ನರಿತು ಒಂಟಿಯಾಗಿ ಹೋರಾಡುವ ಭಾವನೆಯೇ ನಿನ್ನ ಮುಂದಿನ ಬಾಳಿನ ಹಾದಿಗೆ ದಾರಿದೀಪವಾಗಿ ಕಾಣುತ ಹಿಂದಿನ ಮನಸಿನ ನೋವುಗಳನ್ನು ಏಕಾಂಗಿಯಾಗೆ ಮರೆಯುತ ತಂದೆ ತಾಯಿ ಹಿತೈಷಿ ದೇವರ ಆಶೀರ್ವಾದ ನಿನ್ನ ಬಾಳಿಗೆ ಮೀಸಲು ಅದು ನಿನ್ನ ದಿನ ನಿತ್ಯದ ಕಠಿಣ ಪರಿಶ್ರಮದ ಪ್ರತಿಫಲಕ್ಕೆ ಕಾವಲು ಈ ಎಲ್ಲದುದರ ಜೀವ ಅಡಗಿದೆ ನಿನ್ನ ಈ ಅಂಗೈಯಲ್ಲಿ ಕೈಯ ಚಾಚದೆ ಕೊಡುಗೈ ದಾನಿಯಾಗಿ ಪುಣ್ಯವ ಪಡೆದುಕೊ ಬಾಳಿನಲ್ಲಿ ಬಾಳ ಮುಗಿಸಿ ಉಸಿರ ಚೆಲ್ಲಿ ಅಮರನಾಗು ಭೂತಾಯಿಯ ಮಡಿಲಲ್ಲಿ.
ವಿನಯ್ ಪಿ ಭಾವಿ
ಜಿಲ್ಲೆ : ಬೆಂಗಳೂರು ಉತ್ತರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ