ಶರಣರ ನೆನೆಯೂ ಮನವೇ
ಶರಣರ ಅರಿವು ಮನವೇ
ಹಾದಿ ಬೀದಿಯ ಸುತ್ತಿ ಹರದಾಡಿ ಹೋಗುವ ಮುನ್ನ
ಹುಳ ಹತ್ತಿ ಸುಳಿಗೆ ಬಿದ್ದು ಕೊಳೆತು ಹೋಗುವ ಮುನ್ನ
ಶರಣರ ನೆನೆಯೋ ಮನವೇ ….
ದ್ವೇಷ ಅಸೂಯೆ ಹಗೆತನಗಳ
ಬೆನ್ನ ಹತ್ತಿ ಹೋಗುವ ಮುನ್ನ
ಸುಳ್ಳು ಸುಲಿಗೆ ಮೋಸ ವಂಚನೆಗಳ ಬೆನ್ನು ಹತ್ತುವ ಮುನ್ನ
ಶರಣರ ನೆನೆಯೂ ಮನವೇ
ಶರಣರ ಅರಿವು ಮನವೇ …
ಮನೆ ಮಠ ತೊರೆದು ಜಡೆ ಗಡ್ಡ ಬಿಡುವ ಮುನ್ನ
ನಾನು ನನ್ನದೇವೆಂದು ಚಂಬ ಕೊಚ್ಚಿಕೊಳ್ಳುವ ಮುನ್ನ
ಶರಣರ ನೆನೆಯೋ ಮನವೇ
ಶರಣರ ಅರಿವು ಮನವೇ ಜಗದೊಳಗೆ
ಬದುಕಬೇಕು ಜನುಮದಲ್ಲಿ ಹೆಸರಿರಬೇಕು
ಬದುಕುವ ದಾರಿ ಹಿಡಿಯಬೇಕು ಬಂಗಾರದ ಬಾಳ್ವೆ ಮಾಡಬೇಕು
ಶರಣರ ನೆನೆಯೂ ಮನವೇ
ಶರಣರ ಅರಿವು ಮನವೇ….
ಡಾ. ಅ.ಬ. ಇಟಗಿ
ಗಿರಿಯಾಲ ಕೆ ಬಿ
ಬೈಲಹೊಂಗಲ ತಾಲೂಕು
ಬೆಳಗಾವಿ ಜಿಲ್ಲೆ
591109
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ