ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕಲ್ಲಲಿ ಕಲೆಯನ್ನು ಕಂಡ ಬೇಲೂರು ಶಿಲ್ಪದ ಬೀಡು
ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ನಾಡು
ರನ್ನ ಪಂಪರ ಕವಿವಾಣಿಯ ನಾಡು ನಮ್ಮ ಕನ್ನಡ ನಾಡು
ಸಂಸ್ಕೃತಿ-ಕಲೆಗಳ ಸುಗಂಧವನ್ನು ಬೀರುವ ನಾಡಿದು
ಚಂದದ ನುಡಿ, ಅಂದದ ಅಡಿ, ನಮ್ಮ ಭಾಷೆಯಿದು
ಕವಿ ಕೋಗಿಲೆಗಳು ಹಾಡಿ ಹೊಗಳಿದ ನಾಡು ನಮ್ಮದು
ಉಸಿರಲ್ಲಿ ಕನ್ನಡ ಸದಾ ಅಚ್ಚ ಹಸಿರಾಗಿರಲಿ ಆಶಯ ನಮ್ಮದು
ಹಸಿರು ವನಗಳ ನಾಡು ಬೆಟ್ಟ ಘಟ್ಟಗಳ ಬೀಡು
ಮಾವು ಬೇವು ತೆಂಗು ಬೆಳೆಯುವ ವೃಕ್ಷಗಳ ನಾಡು
ಕಾವೇರಿ ಕೃಷ್ಣ ಗೋದಾವರಿ ಮೈದೊಳುವ ನಲುನಾಡು
ಕನ್ನಡ ಕಂಪಿನ ನುಡಿ ಚೆಲುವಿನ ಒಲವಿನ ಸಿರಿ ನಾಡು
ಕಲಿತವರಿಗೆ ಅಮೃತ ನೆನೆದವರಿಗೆ ನೆರಳು ನಮ್ಮ ನಾಡು
ಕಲೆಯನ್ನು ಶಿಲೆಯಲಿ ಬೆಳೆಸಿದ ನಾಡು ನಮ್ಮ ನಾಡು
ಕನ್ನಡ ಕಂಪಿನ ನುಡಿ ನಾಡು ನಮ್ಮ ನಾಡು
ಬದುಕು ನೀಡಿದ ಪಾವನ ಭೂಮಿ ನಮ್ಮ ನಾಡು
ಸ್ವಾಭಿಮಾನದಿ ತಲೆಯೆತ್ತಿ ನಿಂತಿರುವ ನಮ್ಮ ನಾಡು
ಕಥೆ ಕವನಗಳಿಗೆ ಸ್ಫೂರ್ತಿಯಾಗಿರುವ ಭಾಷೆಯ ನಾಡು
ಭೇದ ಭಾವ ತೋರದೆ ನೆಲೆಯ ಕಲ್ಪಿಸಿದ ನಾಡು
ನಮ್ಮೆಲ್ಲರ ಹೆಮ್ಮೆಯ ನಾಡು ಕನ್ನಡ ನಾಡು
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ