ಕಲ್ಲು ಕಟ್ಟಡ ಗುಡಿಯ ಮಾಡಿ
ಬೇಲಿ ಮುಳ್ಳು ಕಿತ್ತು ಬಿಸಾಡಿ
ಎಲ್ಲ ಮಕ್ಕಳು ತನ್ನವರೆಂದು
ತಾನು ಮಾತ್ರ ಕಷ್ಟವ ತಿಂದು ಅಂಗೈ
ಅಗಲದ ಜಾಗದಲ್ಲಿ ನಿಂತು ಜಗವನೆ ಸುತ್ತಿಸಿ ತಂದವ
ನನ್ನ ಗುರು
ಶುಭ್ರ ಶಾಂತಿಯ ಬಟ್ಟೆಯ ತೊಟ್ಟು
ಹೃದಯ ವಿಶಾಲದಿ ನಗುವನವಿಟ್ಟು
ನಡೆ ನುಡಿಯಲಿ ವ್ಯಕ್ತಿತ್ವ ತೊಟ್ಟು
ಬಡಿಗೆಬೆತ್ತದಿ ಬಾಸುಂಡೆ ಕೊಟ್ಟು
ನನ್ನ ಬಾಳಿನ ಕತ್ತಲಲ್ಲಿ ಬೆಳಕಾಗಿ ನಿಂತವ
ನನ್ನ ಗುರು
ಅನ್ನ ವಸ್ತ್ರವ ಬೇಡಿ ಅಕ್ಷರದ ಅರಿವನು ನೀಡಿ
ಎನ್ನ ಕೈ ಹಿಡಿದು ಕಲಿಸಿದಾತ
ಕಣ್ಣಲ್ಲಿ ಕಣ್ಣಿಟ್ಟು ನೋಡಿದಾತ
ತಪ್ಪು ಕಂಡು ಕೆನ್ನೆಗೆ ಬಾರಿಸದಾತ
ಅತ್ತಾಗ ತಬ್ಬಿಕೊಂಡು ಮುದ್ದಿಸಿದಾತ
ನನಗೆ ದೇವದೂತ ನನ್ನ ಗುರು
ತನ್ನ ಶಿಷ್ಯರು ಹೆಚ್ಚು ಓದಿ ಸಾಧನೆ
ಮಾಡಿದಾಗ ಎಲ್ಲರ ಎದುರಿಗೆ ಹೆಮ್ಮೆಯ
ಪಟ್ಟು ಹಿರಿಹಿರಿ ಹಿಗ್ಗುತ್ತಾ ಹಾರೈಸಿದಾವ
ಬೆನ್ನ ಮೇಲೆ ಕೈಯಿಟ್ಟು
ಶಕ್ತಿ ಬಲವ ತುಂಬಿದಾವ
ನನ್ನ ಗುರು
ಡಾ.ಅ.ಬ.ಇಟಗಿ
ಬೆಳಗಾವಿ