ನವ ಮಾಸ ಬಸಿರಲಿ ಹೊತ್ತು
ಪರಿಚಯಿಸಿದಳು ನಮಗೆ ಹೊಸ ಜಗತ್ತು
ಉಣಿಸಿದಳು ಮಮತೆ ವಾತ್ಸಲ್ಯದ ತುತ್ತು
ಪೋಷಿಸಿ ಬೆಳೆಸಿದಳು ಉತ್ತಮ ಸಂಸ್ಕಾರವನ್ನಿತ್ತು
ಸ್ಪೂರ್ತಿದಾಯಕ ನುಡಿಗಳಿಂದ ಹುರಿದುಂಬಿಸಿದವಳು
ಕಷ್ಟಗಳಲ್ಲಿ ಜೊತೆಯಾಗಿ ಧೈರ್ಯ ತುಂಬಿದವಳು
ತನ್ನ ಮಕ್ಕಳ ಸುಖವೇ ತನಗೆ ಭಾಗ್ಯವೆಂದವಳು
ಮಕ್ಕಳಿಗಾಗಿ ಹಗಲಿರುಳು ಶ್ರಮಿಸಿದವಳು
ಅಮ್ಮನೆಂದರೆ ಅಭೂತಪೂರ್ವ ಶಕ್ತಿ
ಒಳ್ಳೆಯ ಕೆಲಸಗಳಿಗೆ ಅವಳ ನುಡಿಯೇ ಸ್ಪೂರ್ತಿ
ಬೋಧಿಸಿದಳು ಉತ್ತಮ ಮಾನವೀಯ ಮೌಲ್ಯ ನೀತಿ
ಶ್ರಮಿಸಿ ಬೆಳಗಿಸಿದಳು ನಮ್ಮ ಬಾಳ ಜ್ಯೋತಿ
ತ್ಯಾಗಮಯಿ ತಾಯಿಯೊಬ್ಬಳು ನೀನಾಗಿ
ಸಂಕಷ್ಟದಲಿ ನೆರವಾಗುವ ಸ್ನೇಹಿತೆಯಾಗಿ
ತಪ್ಪಿದ್ದರೆ ತಿದ್ದಿ ಬುದ್ಧಿ ಹೇಳುವ ಮಾರ್ಗದರ್ಶಕಳಾಗಿ
ಪೂಜಿಸುವೆ ನನ್ನಮ್ಮನನ್ನು ದೇವತೆಯಾಗಿ
ಉಷಾ ಪ್ರಶಾಂತ್
ಸಿದ್ದಾಪುರ ,ಉತ್ತರ ಕನ್ನಡ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.