ತೂಗುತಿದೆ ನಿಜ ಬಯಲಲಿ
₹150.00
(ಶರೀಫರ ಆಯ್ದ ತತ್ವಪದಗಳ ಜೀವಸಾರ)
Author : ದಾವಲಸಾಬ ನರಗುಂದ
Publishers Name: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಲೇಖಕರಾದ ದಾವಲಸಾಬ ನರಗುಂದ ಇವರು ಸಂತ ಶರೀಫ ಸಾಹೇಬರ ತತ್ವಪದಗಳ ಪ್ರಭಾವಕ್ಕೆ ಒಳಗಾಗಿರುವರು, ಶರೀಫರು ರಚಿಸಿದ ತತ್ವಪದಗಳು ನಾಡಿನಾದ್ಯಂತ ಜನಮಾನಸದಲ್ಲಿವೆ. ಅನಕ್ಷರಸ್ಥರಿಂದ ಹಿಡಿದು, ಹಳ್ಳಿ-ಪಟ್ಟಣ- ನಗರಗಳ ಎಲ್ಲ ವಯೋಮಾನದವರು ಇವರ ತತ್ವಪದಗಳನ್ನು ಹಾಡಿದ್ದಾರೆ. ಹಾಡು ಕೇಳಿ ಆನಂದ ಪಡೆದಿದ್ದಾರೆ. ಆತ್ಮ-ಪರಮಾತ್ಮ ಗಹನತೆ, ನಿಸರ್ಗ ಸತ್ಯ, ಬದುಕಿನ ಕುರಿತು ಉಪದೇಶ ನೀಡುವ ಶರೀಫರ ತತ್ವಪದಗಳ ಕುರಿತು ಲೇಖಕರು ಅಧ್ಯಯನದಲ್ಲಿ ತೊಡಗಿಸಿ ಕೊಂಡಿರುವುದು ಅವರ ಆಸಕ್ತಿಯನ್ನು ಮೆಚ್ಚತಕ್ಕದ್ದು.
ಪ್ರಸ್ತುತ ಕೃತಿ ‘ತೂಗುತ್ತಿದೆ ನಿಜ ಬಯಲಲಿ’ ಸಂತ ಶರೀಫರ ಆಯ್ದ ಐವತ್ತೈದು ತತ್ವಪದಗಳ ವಿಶ್ಲೇಷಣೆಗೈದ ಕೃತಿ ಇದಾಗಿದೆ. ಅನುಭಾವಿಗಳನ್ನು ಅವರ ತತ್ವಗಳನ್ನು ಅಧ್ಯಯನಿಸುವುದು, ಅರ್ಥೈಸುವುದು, ಸಮಾಜಕ್ಕೆ ತಿಳಿಸುವುದು ತುಂಬಾ ಕಷ್ಟಸಾಧ್ಯವಾದ ಕೆಲಸ, ದೇವರು-ಧರ್ಮ, ಮನುಷ್ಯ-ಮನುಷ್ಯತ್ವ, ಪಾಪ-ಪುಣ್ಯಗಳ ಹುಡುಕಾಟ ವಿಸ್ಮಯವಾಗಿದೆ. ಪ್ರಪಂಚದಲ್ಲಿ ಸಿಲುಕಿದ ಪ್ರತಿ ಮನುಷ್ಯನಲ್ಲಿನ ಸಂಸಾರದ ಹೇಯತೆಯನ್ನು, ಭಗವಂತನ ಶ್ರೇಷ್ಠತೆಯನ್ನು ಬೋಧಿಸಿ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಮರುಸ್ಥಾಪಿಸಲು ಶರೀಫರ ತತ್ವಪದಗಳು ಹೇಗೆ ಪ್ರೇರಣೆಯಾಗಿವೆಂಬುದನ್ನು ಪ್ರತಿಯೊಂದು ತತ್ವಪದದ ಹಿನ್ನೆಲೆ ಅರ್ಥಪೂರ್ಣವಾಗಿ ಕೃತಿಯಲ್ಲಿ ವಿಶ್ಲೇಷಣೆ ಮಾಡಿಸಿದ್ದಾರೆ. ಇಂಥ ಮೌಲಿಕ ಕೃತಿ ರಚಿಸಿದ ಲೇಖಕರಾದ ದಾವಲಸಾಬ ನರಗುಂದ ಇವರು ಇನ್ನೂ ಮಹತ್ವದ ಕೃತಿಗಳನ್ನು ರಚಿಸಲೆಂದು ಶುಭ ಹಾರೈಸುವೆ.
ಡಾ. ಪಿ. ಸಿ. ನಿಂಗಣ್ಣ



ಶಿವರಾಜ್ ಎಸ್ ಅರಳಿ –
ಸಂತ ಶಿಶುನಾಳ ಶರೀಫರ ತತ್ವಪದಗಳಲ್ಲಿನ ಸಾರವು ಜೀವನದ ನಿಜ ಅಥ೯ಕ್ಕೆ ಹಿಡಿದ ಕೈಗನ್ನಡಿಯಾಗಿದೆ… ಪ್ರತಿಯೊಬ್ಬರು ಓದಲೇಬೇಕಾದ ಪುಸ್ತಕವಿದು