You are currently viewing ನಮ್ಮ ಉಸಿರು ಕನ್ನಡ

ನಮ್ಮ ಉಸಿರು ಕನ್ನಡ

ಕರ್ನಾಟಕ ಹೆಸರಾಯಿತು ಕನ್ನಡ ಉಸಿರಾಯಿತು
ಕರ್ನಾಟಕ ಕನ್ನಡ ರಾಜ್ಯೋತ್ಸವದ ಸಂಭ್ರಮವಾಯಿತು
ಪಠ್ಯ ಪುಸ್ತಕಕಷ್ಟೆ ಸೀಮಿತವಾಗದೆ ಕನ್ನಡದ ಭಾಷೆಯು
ಬೆಳೆಸಲು ಕಲಿಸಲು ಉಳಿಸಲು ನಮ್ಮೆಲ್ಲರ ಶ್ರಮವು ನಿರತವು

ಕನ್ನಡದ ಕಂದಮ್ಮಗಳಿರ ನೋಡಿರಿ ಕನ್ನಡ ನಾಡನ್ನು
ಕನ್ನಡದ ಕಂಪನ್ನ ಸಾರಿರಿ ಮರೆಯದೆ ಮನಸ್ಸನ್ನು
ಹಲವು ರಾಜಮನೆತನವಾಳಿದ ಕನ್ನಡ ನಾಡನು
ಉತ್ತರದಿಂದ ದಕ್ಷಿಣದವರೆಗೂ ಕಂಗೊಳಿಸುವ ಬೀಡನು

ಚಾಲುಕ್ಯರಾಳಿದ ಬಾದಾಮಿಯ ಕೆತ್ತನೆಯ ಸೊಬಗು
ಐಹೊಳೆ ಪಟ್ಟದಕಲ್ಲಿನ ಕೆತ್ತನೆಯ ಬೆಡಗು
ರಾಯಚೂರು, ಕಿತ್ತೂರಿನ, ದುರ್ಗದ ಕೋಟೆಯ ಮೆರಗು
ನಭದ ನಕ್ಷತ್ರದಂತೆ ಮಿನುಗುವ ಮೈಸೂರು ಅರಮನೆ ಸೊಬಗು

ಕನ್ನಡದ ಪಂಪ ರನ್ನ ವ್ಯಾಸರನ್ನು ಮರೆಯದೆ
ಜ್ಞಾನಪೀಠವನ್ನು ತಂದುಕೊಟ್ಟ ಕನ್ನಡದ ಕವಿಗಳಿಗೆ ನಮಿಸುತ
ಹಳೆಗನ್ನಡ,ಹೊಸಕನ್ನಡವೆನ್ನದೇ ಇರುವ ಕನ್ನಡವ ಉಳಿಸುತ
ಒಟ್ಟಾಗಿ ಎಲ್ಲರೂ ಆಚರಣೆ ಕನ್ನಡದ ಸಂಭ್ರಮ ಪಡುತ

ಜಾತಿಮತದ ಲೆಕ್ಕವ ಮಾಡದೆ ಮುಂದಾಗಿ
ಶಾಂತಿ ಸಂಯಮಕೆ ಮನಸೆಲ್ಲ ಜೊತೆಯಾಗಿ
ಮನದಲ್ಲಿ ಮೂಡಲಿ ಸಂತೋಷದ ಕಹಳೆಯು
ಭುವನೇಶ್ವರಿ ತಾಯಿಗೆ ಸಿಗಲಿ ಶಾಂತಿ ನೆಮ್ಮದಿಯು

ತೊದಲು ನುಡಿಯಲ್ಲೇ ಸಿಗುವುದು ಆನಂದ
ವರ್ಣನೆ ಮಾಡಲು ಬೇಕಲ್ಲವೇ ವರ್ಣಮಾಲೆಯ ಬಂಧ
ಕಲಿಯಿರಿ, ಕಲಿಸಿರಿ ಮಾತಾಡಿ ನಿತ್ಯ ಕನ್ನಡವನ್ನು
ಮಾತೃ ಭಾಷೆಯ ಆಡಳಿತದಲಿ ಇರಲಿ ರಾಜ್ಯದ ತುಂಬೆಲ್ಲ

ಹರಿಯುವ ನದಿಗಳಿಗೆ,ಚಿಗುರುವ ವನಗಳಿಗೆ ಚೈತನ್ಯ ಬೇಕಾಗಿದೆ
ಹಾರಾಡುವ ಹಕ್ಕಿಗಳಿಗೆ, ತಟಸ್ತವಾದ ಕಲ್ಲುಗುಡ್ಡಗಳಿಗೆ ಸವಿನುಡಿವಂತಾಗಿದೆ
ಬಣ್ಣದ ಚಿಟ್ಟೆಗಳಿಗು,ಮೂಕ ಪ್ರಾಣಿಗಳಿಗೂ ರಂಗು ಕಾಣುವಂತಾಗಿದೆ
ಕರುನಾಡ ಕನ್ನಡದತಾಯಿ ಪಡುವ ರಾಜ್ಯೋತ್ಸವದ ಗಳಿಗೆಯ ಶುಭದಿನಕ್ಕಾಗಿ

ಧನ್ಯವಾದಗಳು

ಸವಿತಾ ಮುದ್ಗಲ್
ಗಂಗಾವತಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.