You are currently viewing ಮರ್ಯಾದಾ ಪುರುಷೋತ್ತಮ

ಮರ್ಯಾದಾ ಪುರುಷೋತ್ತಮ

ನಿತ್ಯಪೂರ್ಣ ಸುಖ, ಜ್ಞಾನ ಸ್ವರೂಪನೆಂಬ ಅರ್ಥ ಕೊಡುವ ರಾಮ ಎಂಬ ಪದದಲ್ಲಿ ಸುಖ ಮತ್ತು ಜ್ಞಾನದಿಂದ ಕೂಡಿದೆ. ಮಾನವನು ವಿಕಾರರಹಿತವಾದ ಆತ್ಮನಾಗಿರಬೇಕೆಂಬ ಸತ್ಯವನ್ನು ಪ್ರತಿಪಾದಿಸುವ ಶ್ರೀರಾಮಚಂದ್ರನ ವ್ಯಕ್ತಿತ್ವವು ಪರಮೋಚ್ಛವಾದುದು. ಶಾಸ್ತ್ರ, ವೇದಗಳನ್ನು ಆಳವಾಗಿ ಅಭ್ಯಸಿಸಿ ನಾಡಿನ ಸಂಸ್ಕೃತಿಯನ್ನು ಉನ್ನತವಾಗಿಸಬೇಕೆಂಬುದನ್ನು ತಿಳಿಸುತ್ತದೆ. ಪಿತೃ ವಾಕ್ಯ ಪರಿಪಾಲನೆಯ ಮೂಲಕ ಶುದ್ಧಾತ್ಮನಾಗಿ ಗುರು-ಹಿರಿಯರಿಗೆ ವಿಧೇಯನಾಗಿರಬೇಕೆಂಬುದನ್ನು ತೋರಿಸಿದ ಶ್ರೀರಾಮ ಮರ್ಯಾದಾ ಪುರುಷೋತ್ತಮನಾಗಿದ್ದಾನೆ. ತನ್ನನ್ನು ವನವಾಸಕ್ಕೆ ಕಳುಹಿಸಿದ ಕೈಕೇಯಿ ಮಾತೆಯನ್ನೂ ಕೂಡ ದ್ವೇಷಿಸದೆ,ಪ್ರೀತಿಸಿ ಹಿರಿಯರಲ್ಲಿ ಭಕ್ತಿ, ವಿನಯತೆಯನ್ನು ಪ್ರದರ್ಶಿಸಿದ ರಘುಕುಲ ತಿಲಕನ ನಡತೆ ನಮಗೆ ದಾರಿದೀಪವಾಗಿದೆ. ಧರ್ಮಕಾರ್ಯಗಳಿಗೆ ಅಡ್ಡಿ ಮಾಡುವವರನ್ನು ಸಂಹರಿಸಿ ಧರ್ಮರಕ್ಷಕನಾಗಿ ಮೆರೆದ ಶ್ರೀರಾಮನು ನಮಗೆ ಅಧರ್ಮದ ವಿರುದ್ಧ ಸಿಡಿದೇಳಬೇಕು ಎಂಬ ನೀತಿ ಬೋಧಿಸುತ್ತದೆ. ‘ಯಥಾ ರಾಜಾ ತಥಾ ಪ್ರಜಾ’ ಎಂಬ ಮಾತಿನಂತೆ ಶ್ರೀರಾಮಚಂದ್ರನ ರಾಜ್ಯ ಪಾಲನೆಯಲ್ಲಿ ಪ್ರಜೆಗಳೂ ಧರ್ಮತತ್ಪರರಾಗಿದ್ದರು. ಸುಳ್ಳು ಅವರ ಬಳಿ ಎಂದೂ ಸುಳಿಯಲಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಮಾತಿಗೆ ಗೌರವ ನೀಡಬೇಕೆಂದು ಪ್ರತಿಪಾದಿಸುವ ನಿಟ್ಟಿನಲ್ಲಿ ಪತಿವ್ರತೆ ಸೀತೆಯನ್ನು ಕಾಡಿಗಟ್ಟಿ ತಾನೂ ಎಲ್ಲ ಸುಖ ಸೌಲಭ್ಯವನ್ನು ತ್ಯಜಿಸಿ ರಾಜ್ಯಭಾರ ಮಾಡಿದ ಮಹಾನ್ ವ್ಯಕ್ತಿತ್ವ ನಮಗೆ ಮಾದರಿಯಾಗಲಿ.

ಶ್ರೀಮತಿ ದೀಪಾಲಿ ಸಾಮಂತ
ದಾಂಡೇಲಿ, ಉತ್ತರ ಕನ್ನಡ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.