You are currently viewing ಮನದಿಂಗಿತ

ಮನದಿಂಗಿತ

ಹೆಬ್ಬಂಡೆಗಳ ನಡುವೆ ಚಿಗುರಿತು ಮೊಳಕೆಯೊಂದು
ಹೆಮ್ಮರ ತಾನಾಗುವ ಬಯಕೆಯೊಂದಿಗೆ
ಝಾರಿ ನೀರು ತಂದ ಮನ್ನಿನಾಸರೆಯಲ್ಲಿ
ಕವಲೊಡೆದು ಬೆಳೆಯಿತು ವ್ರಕ್ಷವಾಗಿ….

ಕಪ್ಪು ಕಾರ್ಗತ್ತಲು ಕವಿದಿರಲು
ಬೆಳಕು ಕಾಣಲು ಅರಸಿರಲು ಮಿಣುಕು
ಹುಳ ಹಾರಿರಲು ದಾರಿ ಕಾಣುವುದೇ
ಹೆಮ್ಮರವಾಗಿ ಹೊಮ್ಮ್ಮಿ ಬರಲು

ನೀರೊಳಗೆ ಸಿಲುಕಿದ ಜೀವಕೆ
ಹುಲ್ಲು ಕಡ್ಡಿಯೂ ಆಸರೆ ಯಾದಂತೆ
ನಿನ್ನ ಆಜ್ಞೆ ಇಲ್ಲದೆ ಜರುಗಿಪುದೆ ಜಗದಿರುವು

ನೀ ನಡೆಸಿದಂತೆ ಬದುಕು ನಿನ್ನಾಟದ ಪಗಡೆ ಜೀವ
ನಲಿವು – ನೋವನು ಕೊಟ್ಟು ಹದಮಾಡಿ ಮಾಡಿರುವ
ಗೊಂಬೆಯನ್ನು ಕಾಯ್ವ ಈಶ ನಿನಗೆ ಶರಣು….

ಆರತಿ ಹೆಗಡೆ
ಉತ್ತರ ಕನ್ನಡ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.