You are currently viewing ಮಹಾತ್ಮ ಗಾಂಧೀಜಿ ಮಹಾನ್ ಸಾಧಕ

ಮಹಾತ್ಮ ಗಾಂಧೀಜಿ ಮಹಾನ್ ಸಾಧಕ

ಇವರ ಬಾಲ್ಯ ಜೀವನ ಶೈಲಿ ಸಿರಿತನದ್ದು. ಓದಿಗಾಗಿ ಇವರು ಎಂದು ಕಷ್ಟ ಪಡಲಿಲ್ಲ. ಯೌವನದಲ್ಲಿ ಆಂಗ್ಲ ಆಧಿಕಾರಿಗಳಿಂದ ಅವಮಾನ ಮಾಡಿಸಿಕೊಂಡು ಇವರ ಸಿಡಿದೆದ್ದರು. ಅವರ ಬಂದೂಕಿನ ನಳಿಕೆಯ ಗುಂಡುಗಳಿಗೆ,ಮೊದಲನೇ ಅಸ್ತ್ರ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಅದುವೇ ಸಹನೆ, ತಾಳ್ಮೆ ಕ್ಷಮೆ ಶಾಂತಿ ನೆಮ್ಮದಿ ಮಂತ್ರ ತಂತ್ರ ಪ್ರಯೋಗಿಸಿದರು.

ಇದರಿಂದಾಗಿ ಮೊದಲು ಆಂಗ್ಲರಿಗೆ ಬಿಸಿ ಮುಟ್ಟಿಸಿದರು.ಭಾರತಮಾತೆಯಮಕ್ಕಳನೆತ್ತರುಹರಿಯದಂತೆ ನೋಡಿಕೊoಡರು. ಆಂಗ್ಲರನ್ನು ಭಾರತ ಮಾತೆಯ ನೆಲದಿಂದ ಹೊರದಬ್ಬಲು ಶಾಂತಿ ಮಂತ್ರ ಉಪವಾಸ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ಮಾಡಿದರು.ಆಂಗ್ಲರಿಗೆ ಕೋವಿಗೆ ಇವರ ಸತ್ಯಾಗ್ರಹ ತಕ್ಕ ಉತ್ತರ ನೀಡಿತು.

ಭಾರತ ಮಾತೆಯ ಸ್ವಾತಂತ್ರವಾಗಲು ಇವರ ಸಾಧನೆ ಬಹಳ ಮಹತ್ವ ಪಡೆದಿದೆ. ಹಾಗೆಯೇ ವಿಭಿನ್ನ ಶೈಲಿಯಿಂದ ಅಂದರೆ ಎಲ್ಲರೂ ಧರಿಸುವ ಉಡುಪುಗಳನ್ನು ತೊಡದೆ.ತಾವೊಬ್ಬರೇ ತುಂಡು ಪಂಚೆ ಮೇಲೊಂದು ವಸ್ತ್ರ ಅದು ಬಿಳಿ ಬಣ್ಣದ್ದು ಧರಿಸಿ ಆಂಗ್ಲರ ಮಣಿಸಿದರು.

ಬಾಲ್ಯ ಯೌವನದಲ್ಲಿ ಸೂಟು ಬೂಟು,ಧರಿಸಿದ್ದರು. ಇದರಿಂದ ಆಂಗ್ಲರ ಮಣಿಸುವದು ಅಸಾಧ್ಯ ಎಂದು ಅರಿತಿದ್ದರು. ಹೀಗಾಗಿ ವಿಶೇಷ ವಸ್ತ್ರ ಧರಿಸಿ ಆಂಗ್ಲರ ಮಣಿಸಿದರು.

ರಾಜೇಂದ್ರ ಹೆಗಡೆ ಹಾವೇರಿ
M: ೮೩೧೦೩೮೪೫೪೦
ರಾಮ ಕೃಷ್ಣ ಕುಟೀರ ವಿನಾಯಕ ನಗರ
ಡಿ ಸಿ ಆಫೀಸ್ ರಸ್ತೆ ನೀರಾವರಿ ಇಲಾಖೆ ಹತ್ತಿರ
ಹಾವೇರಿ.೫೮೦೦೦