ಸುಂದರ ಮಲೆನಾಡಿನ ತಪ್ಪಲಿನಲ್ಲಿ ಜನಿಸಿದವರು
ತಂದೆ ವೆಂಕಟಪ್ಪನವರು ತಾಯಿ ಸೀತಮ್ಮನವರು
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನೆಂಬ ನಾಮಧೇಯರು
ರಸಋಷಿ ರಾಷ್ಟಕವಿ ಕುವೆಂಪು ಅಗ್ರಮಾನ್ಯರಿವರು
ಕನ್ನಡ ಸಾಹಿತ್ಯ ಲೋಕದ ಖ್ಯಾತಕವಿ ದಿಗ್ಗಜರಿವರು
ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು
ಬಹುಮುಖ ಪ್ರತಿಭ್ವಾನಿತ. ಧೀಮಂತ ಸಾಹಿತಿಯಿವರು
ಇಪ್ಪತ್ತನೇ ಶತಮಾನ ಕಂಡಂತ ದೈತ್ಯ ಪ್ರತಿಭೆಯಿವರು
ಜಗದಕವಿ ಯುಗದ ಶ್ರೇಷ್ಠ ಕವಿ ಪುಂಗವರರಿವರು
ವಿಶ್ವಮಾನವ ಸಂದೇಶ ನೀಡಿದ ಮಹಾತ್ಮರಿವರು
ಓ ನನ್ನಚೇತನ ಆಗು ನೀ ಅನಿಕೇತನ ಎಂದವರು
ಮನುಜಮತ ವಿಶ್ವ ಪಥ ಸಂದೇಶವ ಸಾರಿದವರು
ಕನ್ನಡ ಭಾಷೆಯ ಹಿರಿಮೆ ಜಗಕೆಲ್ಲ ಸಾರಿದವರು
ಬಾರಿಸು ಕನ್ನಡ ಡಿಂಡಿಮವ ಮೊಳಗಿಸಿದವರು
ಕಸ್ತೂರಿ ಕನ್ನಡದ ಕಂಪನೆಲ್ಲೆಡೆ ಪಸರಿಸಿದವರು
ಮೊದಲ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು
ಪದ್ಮವಿಭೂಷಣ ಪಂಪ ಪ್ರಶಸ್ತಿಯ ಪಡೆದವರು
ಕನ್ನಡವೇ ಸತ್ಯ ಕನ್ನಡವೇ ನಿತ್ಯವೆಂದ ಸಹೃದಯರು
ಎಲ್ಲಾದರೂ ಇರು ಎಂತಾದರೂ ಇರಿ ನೀವೆಲ್ಲರು
ಎಂದೆಂದಿಗೂ ನೀವು ಕನ್ನಡಿಗರಾಗಿರಿ ಎಂದವರು
ಕಥೆ ಕವನ ಕಾವ್ಯ ಕಾದಂಬರಿಗಳ ರಚನೆಕಾರರಂತೆ
ರಾಷ್ಟ್ರ ಕವಿ ಕುವೆಂಪುಗಿಂದು ಜನುಮ ದಿನವಂತೆ
ಕವನ ರಚಿಸಿ ನಿಮಗೆ ಶುಭಾಶಯವ ಕೋರುವೆನು
ಹುಟ್ಟುಹಬ್ಬವು ನಿಮಗಿಂದು ಹರಸಿ ಹಾರೈಸುವೆನು
🙏ಧನ್ಯವಾದ
ಪೂರ್ಣಿಮಾ ರಾಜೇಶ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.