ಮೇಲು ಕೀಳೆಂಬುದ ತೊಡೆದ ಕ್ರಾಂತಿಕಾರಿ ಬಸವಣ್ಣ
ಕಾಯಕವೇ ಕೈಲಾಸವೆಂದ ಭಕ್ತಿಭಂಡಾರಿ ಬಸವಣ್ಣ
ಮಡಿಯುಟ್ಟು ಮಾಡುವ ಪೂಜೆಯೇ ಶ್ರೇಷ್ಠವಲ್ಲವೆಂದ
ಕೈ ಕೆಸರು ಮಾಡುವ ಒಕ್ಕಲುತನ ಕನಿಷ್ಠವಲ್ಲವೆಂದ
ದುಡಿಮೆಯಲ್ಲಿ ಸಮಬಾಳು ಇರಲೆಂದ
ಗಳಿಕೆಯಲ್ಲಿ ಸಮಪಾಲು ಬೇಕೆಂದ
ಪೂಜೆ ಆತ್ಮೋದ್ಧಾರದ ಮಂತ್ರವೆಂದ
ಕಾಯಕ ದೇಶೋದ್ಧಾರದ ತಂತ್ರವೆಂದ
ಜಾತಿ ವಿಜಾತಿ ಎನ್ನುವ ಕಲ್ಯಾಣ ಮಂಟಪ ತೊರೆದ
ಸರ್ವರೂ ಸಮಾನರೆಂಬ ಅನುಭವ ಮಂಟಪ ಕಟ್ಟಿದ
ಮಂಡೆ ಬೋಳಾದರೆ ಸಾಕೆ ಮನಸ್ಸು ಬೋಳಾಗಬೇಕೆಂದ
ದೇವನೊಲಿವುದು ಭಾಷೆಗಲ್ಲ ಅವನೊಳಗಿನ ಭಾವಕ್ಕೆಂದ
ಅವಶ್ಯಕತೆಗಿಂತ ಹೆಚ್ಚಿನ ಸಂಪಾದನೆ ಅಪರಾಧವೆಂದ
ಅಂತರ್ ಭೋಜನ ಅಂತರ್ವಿವಾಹ ಸಮಾನತೆಗೆ ದಾರಿಯೆಂದ
ಮೌನವಾಗಿ ಉಂಬುವುದು ಆಚಾರವಲ್ಲವೆಂದ
ತುತ್ತಿಗೊಮ್ಮೆ ಶಿವಶರಣರ ನೆನೆಯುತ್ತಿರಬೇಕೆಂದ
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.