You are currently viewing ಕರ್ನಾಟಕದ ಕನ್ನಡಿ ಹೆಮ್ಮೆಯ ಹಂಪೆ

ಕರ್ನಾಟಕದ ಕನ್ನಡಿ ಹೆಮ್ಮೆಯ ಹಂಪೆ

ಚೆಲುವಿನ ಚುಕ್ಕಿ ಒಲವಿನ ಚಿತ್ತಾರ
ಮುಕ್ಕಾದರೇನು ಜಗತ ಪ್ರಸಿದ್ಧ ಗೌಡಕಿ
ಕೃಷ್ನದೇವರಾಯ ಧರೆಗಿಳಿಸಿದ ಸುರಸುಂದರಿ
ಪಾಪ!ಹನ್ನೊಂದು ಮುಗಿಸಿ ನೆಲಕಚ್ಚಿದ ಜೀವ

ವಿಶ್ವ ಸುಂದರಿ !
ಯುನೆಸ್ಕೋ ವಿಶ್ವ ಪರಂಪರೆ ತಾಣ
ಗತ ವೈಭವ ವಿಜಯ ನಗರದ ಮಹಾರಾಣಿ
ಅಯ್ಯೋ! ಮುತ್ತು ರತ್ನದ್ಯಾಪಾರ ನೆನುಪು ಮಾತ್ರ

ಶಿಲಾಬಾಲಿಕೆ!
ಜಕ್ಕಣಾಚಾರಿ ಕುಂಚದಲ್ಲರಳಿದ ಮಯೂರಿ
ಕಣನ್ಮವ ಲಗ್ಗೆಯಿಟ್ಟ ಅಪ್ಸರೆ
ದೇವ- ದೇವಾ!! ದೇವನೂರ ಮಹಾದೇವನ ಕುಸುಮಬಾಲೆ

ಮಾಟಗಾತಿ!
ಬೆಳ್ಳಿ ಬೆಳದಿಂಗಳ ಮಿನುಗು ತಾರೆ
ಬೆಟ್ಟದ ಪರಿಸ್ಥಿತಿ ರೂಪ ಲಾವಣ್ಯ
ಚದುರಿದ ಕಲಾ ಸಂಪತ್ತು ಅನಾಥ ಅವಶೇಷ

ಕಲಾದೇವಿ!
ಕಲೆ ತಂತ್ರಜ್ಞಾನ ಐತಿಹಾಸಿಕ ದಾಖಲೆ
ಕುಶಲಕರ್ಮಿಗಳು ಕೌಶಲ್ಯ ಅಜರಾಮರ
ಕನ್ನಡ ಕೀರ್ತಿ ಕಲಶ ವಿಶ್ವ ಪಸರಿಸಿದೆ

ಓ! ಕಾವ್ಯಕನ್ನೆ
ಬೆಲೆಕಟ್ಟಲಾಗದು ಕನ್ನಡ ನಾಡಿನ ಅನರ್ಘ್ಯ ರತ್ನ
ಹಾಳು ಹಂಪೆ ಹೆಸರು ಒಪ್ಪದು
ಅದು ನೊಂದ ಕರುಳಿನ ನುಡಿ
ಕರ್ನಾಟಕದ ಕನ್ನಡಿ ಹೆಮ್ಮೆಯ ಹಂಪೆ

ಗಣಪತಿ ಚ.ಭೂರೆ
ಆನಂದವಾಡಿ ಪೋಸ್ಟ್ . ಭಾತಂಬ್ರಾ
ತಾ. ಭಾಲ್ಕಿ ಜಿ. ಬೀದರ್
ಮೊಬೈಲ್ ನಂಬರ್ – 7353304510
– 9480297213