ಕರುನಾಡ ತಾಯೆ, ಕನ್ನಡಮ್ಮ, ನಿನಗೆ ವಂದನೆ
ನಿನ್ನ ಸೇವೆಯಲಿ ನಾನೆಂದೂ ಕೃತಾರ್ಥೆ, ಪಾವನೆ
ಸಾಸಿರ ವರುಷದ ಇತಿಹಾಸ, ಸಂಸ್ಕೃತಿ ನಿನ್ನದು
ಈ ಮಣ್ಣಲಿ ಜನಿಸಿ, ಬದುಕುವ ಭಾಗ್ಯವು ನನ್ನದು
ಮಾತಿನಲಿ ನಿನ್ನ ನಾದ, ನುಡಿಯಲಿ ನಿನ್ನ ಕಂಪು
ಸಾಹಿತ್ಯ, ಕಲೆಯಲಿ ನೀನೇ ಶಾಶ್ವತ ದೀಪ
ಆ ಕವಿಗಳ ಮಾತು, ಆ ದಾಸರ ಪದಗಳ ಪ್ರೀತಿ
ಅವೆಲ್ಲವೂ ಸೇರಿ ನನ್ನೆದೆಯೊಳಗೆ ಅಚ್ಚಳಿಯದ ಭೀತಿ
ಪಂಪ, ರನ್ನ, ಜನ್ನರ ಕಾವ್ಯದಲಿ ತಲೆದೂಗುವೆ
ಕುವೆಂಪು, ಬೇಂದ್ರೆಯ ಭಾವಕೆ ಹೃದಯವ ಒಪ್ಪಿಸುವೆ
ಹೊಸಗನ್ನಡದ ಸಿರಿ, ಹಳೆಯಗನ್ನಡದ ಗರಿಮೆ
ನಿನ್ನ ಭಾಷೆಯ ಉಳಿವೇ ನನ್ನ ಬದುಕಿನ ಗುರಿ
ಕನ್ನಡದ ಬಾವುಟ ಹಿಡಿದು ಮುಂದೆ ಸಾಗುವೆ
ಪ್ರತಿ ಕನ್ನಡಿಗನ ಹೃದಯವ ಬೆಳಗುವೆ
ನುಡಿ ಸೇವೆ, ನಾಡು ಸೇವೆ, ಇದೊಂದೇ ನನ್ನ ವ್ರತ
ನಿನ್ನ ಮಡಿಲಲಿ ಪಡೆದ ಜನ್ಮವು ಸುಖದ ಅಮೃತ
ನಿನ್ನ ಉಸಿರೇ ನನ್ನ ಉಸಿರು, ನಿನ್ನಾಸೆಯೇ ನನ್ನಾಸೆ
ಕನ್ನಡಮ್ಮನ ಸೇವೆಗೆ ಮುಡಿಪಾಗಿದೆ ಈ ಬದುಕೆಲ್ಲ
ಈ ಪುಣ್ಯ ಕಾರ್ಯದಲಿ ದುಡಿಯುತಲಿ ಸದಾ
ನಾನೆಂದು ಪಾವನೆ, ಧನ್ಯತೆ ನನ್ನಯ
ಮನ ಸದಾ ಸಿದ್ದ
ರೇಖಾ ಹುಲಿಕೆರೆ
ಹೊಳೆಹೊನ್ನೂರು