ಕನ್ನಡ ನಮ್ಮ ಕರ್ನಾಟಕದ ರಾಜ್ಯದ ಭಾಷೆಯಿದು
ಕನ್ನಡದ ಗುಡಿಯಿದು ಸವಿಜೇನ ನುಡಿವ ಕನ್ನಡವಿದು
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಹೆಗ್ಗೆಳಿಕೆಯಿದು
ಭಾರತದ ಪುರಾತನವಾದ ಶಾಸ್ತ್ರೀಯ ಭಾಷೆಯಿದು
ಬ್ರಾಹ್ಮಿಲಿಪಿಯಿಂದ ರೂಪುಗೊಂಡ ಕನ್ನಡ ಭಾಷೆಯು
ಎಂಟು ಜ್ಞಾನಪೀಠ ಪ್ರಶಸ್ತಿಯ ಪಡೆದಂತ ಹೆಮ್ಮೆಯು
ಕನ್ನಡ ಲಿಪಿಯು ಲಿಪಿಗಳ ರಾಣಿಯೆಂದು ಹೆಸರಾದುದು
ರಾಜರ ಆಳ್ವಿಕೆಯ ಕಾಲದಲ್ಲಿ ಆಸ್ಥಾನದ ಭಾಷೆಯಿದು
ನಮ್ಮ ಕಸ್ತೂರಿ ಕನ್ನಡ ಕನ್ನಡಿಗರ ಮಾತೃಭಾಷೆಯಿದು
ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡವಿದು
ನಮ್ಮ ಕನ್ನಡ ಭಾಷೆಯು ಬೆಳೆದು ಬಂದ ಹಾದಿಯಿದು
ಹಳೆಗನ್ನಡ ನಡುಗನ್ನಡ ಹೊಸಗನ್ನಡ ಸಿರಿಗನ್ನಡವಿದು
ಉಸಿರಾಗಲಿ ಕನ್ನಡದ ಹೆಸರೆಂದು ಅಳಿಯದಿರಲೆನ್ನುವ
ಕನ್ನಡಿಗರು ನಾವೆಲ್ಲ ಕನ್ನಡಾಂಬೆಯ ಮಕ್ಕಳೆನ್ನುವ
ಜೈ ಕರ್ನಾಟಕ ನಮೋ ಕನ್ನಡ ಸಾಹಿತ್ಯ ಎನ್ನುವ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಜೈಕಾರ ಹಾಕುವ
ಪೂರ್ಣಿಮಾ ರಾಜೇಶ್
ಹವ್ಯಾಸಿ ಬರಹಗಾರ್ತಿ ,ಕವಯಿತ್ರಿ
ಬೆಂಗಳೂರು